ಉದಯವಾಹಿನಿ, ತಿರುವನಂತಪುರ: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ಇಡೀ ದೇಶಾದ್ಯಂತ ಭಾರೀ ವಿವಾದ ಹುಟ್ಟುಹಾಕಿದ್ದ ʻದಿ ಕೇರಳ ಸ್ಟೋರಿʼ ಸಿನಿಮಾದ ಸುದಿತ್ತೋ ಸೇನ್ ಅವರಿಗೆ ʻಅತ್ಯುತ್ತಮ ನಿರ್ದೇಶಕ ಪ್ರಶಸ್ತಿʼ ಹಾಗೂ ಪ್ರಶಸ್ತಿ ನೀಡಿರುವುದಕ್ಕೆ ಕೇರಳದ ಸಿಎಂ ಪಿಣರಾಯಿ ವಿಜಯನ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ಈ ಕುರಿತು ಮಾತನಾಡಿರುವ ವಿಜಯನ್ ಕೋಮುವಾದ ಪ್ರಚೋದಿಸಲು ಹಾಗೂ ಕೇರಳಕ್ಕೆ ಅವಹೇಳನ ಮಾಡಲು ಯತ್ನಿಸಿದ್ದ ಸಿನಿಮಾವನ್ನ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ, ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾದ ಭಾರತೀಯ ಸಿನಿಮಾ ರಂಗವನ್ನ ತೀರ್ಪುಗಾರರು ಅವಮಾನಿಸಿದ್ದಾರೆ ಕೆಂಡಾಮಂಡಲವಾಗಿದ್ದಾರೆ.‘ದಿ ಕೇರಳ ಸ್ಟೋರಿ’ ಸಿನಿಮಾ 2023ರಲ್ಲಿ ತೆರೆಕಂಡಿತ್ತು. ರಾಜ್ಯದ ಸುಮಾರು 32,000 ಮಹಿಳೆಯರನ್ನು ಮತಾಂತರಗೊಳಿಸಿ, ಭಯೋತ್ಪಾದನಾ ಸಂಘಟನೆಗೆ ಸೇರಿಸಲಾಗಿದೆ ಎಂದು ಚಿತ್ರದ ಟೀಸರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಈ ಚಿತ್ರದ ಬೆನ್ನಲ್ಲೇ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ದೇಶಾದ್ಯಂತ ವಿವಾದದ ಅಲೆ ಕೂಡ ಎದ್ದಿತ್ತು.
ಯಾರ‍್ಯಾರಿಗೆ ಪ್ರಶಸ್ತಿ?
ಅತ್ಯುತ್ತಮ ನಟ: ಶಾರುಖ್ ಖಾನ್, ವಿಕ್ರಾಂತ್ ಮಾಸ್ಸೆ
ಅತ್ಯುತ್ತಮ ನಟಿ: ರಾಣಿ ಮುಖರ್ಜಿ
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ಜವಾನ್
ಅತ್ಯುತ್ತಮ ಹಿನ್ನೆಲೆ ಗಾಯಕ: ಬೇಬಿ
ಅತ್ಯುತ್ತಮ ಪೋಷಕ ನಟಿ: ಉಲ್ಲೊಜೊಕ್ಕು (ಊರ್ವಶಿ), ವಶ್ (ಜಾನಕಿ)
ಅತ್ಯುತ್ತಮ ಪೋಷಕ ನಟ: ಪೂಕಲಂ (ವಿಜಯರಾಘವನ್),
ಪಾರ್ಕಿಂಗ್ (ಮುತ್ತುಪೆಟ್ಟೈ)
ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾಗಳಿವು
ಅನಿಮಲ್ (ಮರು-ರೆಕಾರ್ಡಿಂಗ್ ಮಿಕ್ಸರ್) – ಎಂಆರ್ ರಾಧಾಕೃಷ್ಣನ್
ತೆಲುಗು ಚಿತ್ರ: ಭಗವಂತ ಕೇಸರಿ
ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್
ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ
ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ
ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ
ಮಲಯಾಳಂ ಚಿತ್ರ: ಉಲ್ಲೋಜೋಕ್ಕು
ಕನ್ನಡ ಚಿತ್ರ: ಕಂದೀಲು: ಭರವಸೆಯ ಕಿರಣ
ಅತ್ಯುತ್ತಮ ಹಿಂದಿ ಚಿತ್ರ: ಕಥಲ್: ಎ ಜಾಕ್‌ಫ್ರೂಟ್ ಆಫ್ ಮಿಸ್ಟರಿ, ಗುಜರಾತಿ ಚಿತ್ರ: ವಾಶ್
ಅತ್ಯುತ್ತಮ ಬಂಗಾಳಿ ಚಿತ್ರ: ಡೀಪ್ ಫ್ರಿಡ್ಜ್
ಅತ್ಯುತ್ತಮ ಅಸ್ಸಾಮಿ ಚಿತ್ರ: ರಂಗತಪು 1982
ಅತ್ಯುತ್ತಮ ಸಾಹಸ ನಿರ್ದೇಶನ: ಹನು-ಮಾನ್ (ತೆಲುಗು)
ಅತ್ಯುತ್ತಮ ನೃತ್ಯ ಸಂಯೋಜನೆ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಅತ್ಯುತ್ತಮ ಸಾಹಿತ್ಯ: ಬಳಗಂ
ಅತ್ಯುತ್ತಮ ಸಂಗೀತ ನಿರ್ದೇಶನ: ವಾತಿ (ತಮಿಳು)- ಹಾಡುಗಳು
ಅತ್ಯುತ್ತಮ ಮೇಕಪ್, ಕಾಸ್ಟ್ಯೂಮ್ ಡಿಸೈನರ್: ಸ್ಯಾಮ್ ಬಹದ್ದೂರ್
ಅತ್ಯುತ್ತಮ ನಿರ್ಮಾಣ ವಿನ್ಯಾಸಕಾರ: 2018- ಎವೆರಿವನ್ ಇಸ್ ಎ ಹೀರೋ (ಮಲಯಾಳಂ)
ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ) ಅತ್ಯುತ್ತಮ ಧ್ವನಿ ವಿನ್ಯಾಸ: ಅನಿಮಲ್
ಅತ್ಯುತ್ತಮ ಛಾಯಾಗ್ರಹಣ: ಕೇರಳ ಕಥೆ (ಹಿಂದಿ)
