ಉದಯವಾಹಿನಿ, ಏ.22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ನಡೆಸಿದ್ದರು. ಸುಂದರ ತಾಣದಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆದು ನೆತ್ತರು ಹರಿಸಿದ್ದರು ಪಾಕ್ ಉಗ್ರರು. ಇದಕ್ಕೆ ಹೆಜ್ಜೆ-ಹೆಜ್ಜೆಗೂ ದಿಟ್ಟ ಉತ್ತರ ನೀಡುತ್ತಲೇ ಬಂದಿದ್ದ ಭಾರತೀಯ ಸೇನೆ, ಪ್ರತೀಕಾರಕ್ಕಾಗಿ ಕಾಯುತ್ತಲೇ ಇತ್ತು. ಕೊನೆಗೂ ಸಿಕ್ಕ ಸಮಯ ಬಳಸಿಕೊಂಡ ಭಾರತೀಯ ಸೇನೆ ನರಮೇಧ ನಡೆಸಿದ್ದ ಪಾತಕಿಗಳನ್ನು ಹತ್ಯೆಗೈದಿದೆ. ಶ್ರೀನಗರದ ದಚಿಗಮ್ ಅರಣ್ಯ ಪ್ರದೇಶದಲ್ಲಿ ʻಆಪರೇಷನ್ ಮಹಾದೇವ್ʼ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಹತ್ಯೆಗೈದಿತು.
ಉಗ್ರರ ಹತ್ಯೆ ಬಳಿಕ ಅಲ್ಲಿದ್ದ ರೈಫಲ್, ಬುಲೆಟ್ (Bullet), ವೋಟರ್ ಐಡಿ ಹಾಗೂ ಸ್ಥಳದಲ್ಲಿ ಸಿಕ್ಕ ಚಾಕ್ಲೆಟ್ ಗುರುತುಗಳನ್ನಾಧರಿಸಿ ಹತ್ಯೆಯಾದವರು ಪಾಕ್ ಉಗ್ರರೇ ಅನ್ನೋದನ್ನ ಖಚಿತಪಡಿಸಿಕೊಳ್ಳಲಾಯಿತು. ಆದ್ರೆ ರೈಫಲ್, ಬುಲೆಟ್ ಶೆಲ್‌ಗಳನ್ನ ದಾಳಿಗೆ ಸಂಬಂಧಿಸಿದ್ದೇ ಅಂತ ಕಂಡುಹಿಡಿಯಲು ತಜ್ಞರು ಯಾವ ರೀತಿಯ ಪರೀಕ್ಷೆಗಳನ್ನ ನಡೆಸುತ್ತಾರೆ ಅನ್ನೋ ಕುತೂಹಲ ಇದ್ದೇ ಇರುತ್ತೆ.
