ಉದಯವಾಹಿನಿ, ಮಲಯಾಳಂ ಸಿನಿಮಾ ಇಂಡಸ್ಟ್ರಿಯ ದಂತಕಥೆ ಪ್ರೇಮ್‍ನಜೀರ್ ಪುತ್ರ ಅಬ್ದುಲ್ ಶನ್ವಾಜ್ (71) ನಿಧನರಾಗಿದ್ದಾರೆ. ಅವರು ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಖ್ಯಾತ ಸಿನಿಮಾ ನಟರೂ ಆಗಿದ್ದ ಶನ್ವಾಜ್ ಜೊತೆಗಿನ ಒಡನಾಡವನ್ನ ಇದೀಗ ಅಂಬರೀಶ್ ಪತ್ನಿ, ನಟಿ ಸುಮಲತಾ ಅಂಬರೀಶ್ ಹಂಚಿಕೊಂಡಿದ್ದಾರೆ.ಸುಮಲತಾ ಮಲಯಾಳಂನಲ್ಲಿ ಶನ್ವಾಜ್ ಜೊತೆಯೂ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಶನ್ವಾಜ್ ನಿಧನಕ್ಕೆ ಸುಮಲತಾ ಸಂತಾಪ ಸೂಚಿಸಿದ್ದು ಅವರ ಜೊತೆಗಿನ ನೆನಪನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹಳೆಯ ಸಹೋದ್ಯೋಗಿ ಹಾಗೂ ಆಪ್ತರಾಗಿದ್ದ ಅಬ್ದುಲ್ ಶನ್ವಾಜ್ ನಿಧನರಾಗಿದ್ದಾರೆ. 80ರ ದಶಕದಲ್ಲಿ ಅನೇಕ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದೇವೆ. ಅವರ ತಂದೆ ಪ್ರೇಮ್ ನಜೀರ್ ಜೊತೆಯೂ. ನನಗೆ ನೆನಪಿದೆ ಶೂಟಿಂಗ್ ಬಿಡುವಿನನಲ್ಲಿ `ಕ್ಯಾರಮ್ ಹಾಗೂ ಬ್ಯಾಡ್ಮಿಂಟನ್ ಆಡುವಾಗ ಅವರು ನನ್ನನ್ನು ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು, ಪರಿಶುದ್ಧ ಆತ್ಮ ನಿಮ್ಮದು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ನೆನಪು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!