ಉದಯವಾಹಿನಿ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಳಗದಿಂದ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಕಾಂತಾರ ಪ್ರಿಕ್ವೆಲ್ ಬಿಡುಗಡೆಗೂ ಮುನ್ನ ಕಾಂತಾರ ಸಿಕ್ವೆಲ್ ಕೆಲಸ ಕೂಡ ಭರದಿಂದ ನಡೆಯುತ್ತಿದೆ. ಮೂರು ಮೂರು ಭಾಗಗಳಲ್ಲಿ ಕಾಂತಾರದ ಕಥೆಯನ್ನು ರಿಷಬ್ ಶೆಟ್ಟಿ ಹೇಳಲಿದ್ದಾರೆ. ಅಕ್ಟೋಬರ್ 2ರಂದು ಬಿಡುಗಡೆ ಆಗುವ ಕಾಂತಾರ ಚಿತ್ರದಲ್ಲಿ ಸೂಪರ್ ಸ್ಟಾರ್‌ವೊಬ್ಬರು ಕಾಣಿಸಿಕೊಳ್ಳಲಿದ್ದು, ಅವರೇ ಮುಂದಿನ ಭಾಗದಲ್ಲಿ ಮುಂದುವರೆಯಲಿದ್ದಾರೆ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.
ಶ್ರದ್ಧೆ, ಭಕ್ತಿಯಿಂದ ಮಾಡಿದ ಕೆಲಸಕ್ಕೆ ಯಶಸ್ಸು ಹುಡುಕಿಕೊಂಡು ಬರುತ್ತೆ ಅನ್ನೋದಕ್ಕೆ ನಟ ರಿಷಬ್ ಶೆಟ್ಟಿ ಹಾಗೂ ಅವರ ಟೀಂ ಪ್ರಸಕ್ತ ನಿದರ್ಶನ. ಕಾಂತಾರ ಸಿನಿಮಾ ನಿರ್ಮಿಸಿದವರಿಗೆನೇ ಗೊತ್ತಿರಲಿಲ್ಲ ಅನ್ಸತ್ತೆ ಈ ಲೆವೆಲ್‌ಗೆ ಕ್ರೇಜ್ ಕ್ರಿಯೇಟ್ ಮಾಡುತ್ತೆ ಅಂತಾ. ರಾಷ್ಟ್ರದ ಗಡಿಮೀರಿ ಕಾಂತಾರ ಅಬ್ಬರಿಸಿ ಬೊಬ್ಬಿರಿದಿದೆ. ಈ ಸಿನಿಮಾದ ಪ್ರಿಕ್ವೇಲ್ ನೋಡಲು ರಾಷ್ಟ್ರವ್ಯಾಪಿ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಕಾಂತಾರ ಜಪ ಮಾಡುತ್ತಿದ್ದಾರೆ. ಇದೇ ಹೊತ್ತಿನಲ್ಲೇ ಕಾಂತಾರ ಅಡ್ಡಾದಿಂದ ಹೊಸ ಸುದ್ದಿಯೊಂದು ಬಂದಿದೆ. ಈ ಹೊಸ ಸುದ್ದಿ ಗಾಂಧಿನಗರದಲ್ಲಿ ಹೊಸ ಹೊಸ ಕಥೆಗಳನ್ನ ಸೃಷ್ಟಿಮಾಡುತ್ತಿದೆ.
