ಉದಯವಾಹಿನಿ, ಸ್ಯಾಂಡಲ್‌ವುಡ್‌ನ ನಟ, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಹಾಗೂ ಪತ್ನಿ ದಿವ್ಯ ಮಾಲ್ಡೀವ್ಸ್‌ನ ಕಡಲ ಕಿನಾರೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವ ಆಚರಣೆಯ ಬ್ಯೂಟಿಫುಲ್ ಮುಮೆಂಟ್ಸ್‌ಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾಗಳ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈಹಾಕಿರುವ ರಾಜವರ್ಧನ್ ಇದರ ಮಧ್ಯದಲ್ಲಿಯೂ ಫ್ಯಾಮಿಲಿಗೆ ಕೂಡ ಟೈಂ ಕೊಟ್ಟಿದ್ದಾರೆ. ಸ್ಪೆಷಲ್ ಡೇಯನ್ನ ಸ್ಪೆಷಲ್ ಜಾಗದಲ್ಲಿ ಕಳೆಯೋಕೆ ವಿದೇಶಕ್ಕೆ ಹಾರಿದ್ದಾರೆ. ಇದೇ ವರ್ಷ ತೆರೆಕಂಡ ಗಜರಾಮ ಸಿನಿಮಾ ಬಳಿಕ ಜಾವಾ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ರಾಜವರ್ಧನ್. ಬಿಚ್ಚುಗತ್ತಿ, ಹಿರಣ್ಯ ಹಾಗೂ ಗಜರಾಮ ಸಿನಿಮಾದಲ್ಲಿ ನಟಿಸಿರುವ ರಾಜವರ್ಧನ್ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಹೊಸ ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಸದ್ಯ ಮಾಲ್ಡೀವ್ಸ್‌ನ ಸುಂದರ ತಾಣದಲ್ಲಿ ಪತ್ನಿ ಜೊತೆ ಆ್ಯನಿವರ್ಸರಿ ಸೆಲಬ್ರೇಷನ್ ಮಾಡ್ತಿದ್ದಾರೆ.
