ಉದಯವಾಹಿನಿ, ಪ್ರೀತಿ ಕುರುಡು ಎಂಬ ಮಾತಿದೆ. ಕೆಲವರು ತಮ್ಮ ಪ್ರೀತಿಯನ್ನು ಪಡೆಯಲು ಎಂತಹ ಹೋರಾಟ, ತ್ಯಾಗಕ್ಕೂ ಮುಂದಾದವರಿದ್ದಾರೆ. ಅಂಥವರ ಕಥೆಗಳನ್ನು ನೀವು ಕೇಳಿರಬಹುದು. ಇದೀಗ ಈ ಸ್ಟೋರಿ ಓದಿದ್ರೆ ನಿಮಗೆ ಅಚ್ಚರಿಯಾಗಬಹುದು. ವೈದ್ಯರೊಬ್ಬರು ಪ್ರೀತಿಯ ಹುಚ್ಚಿನಲ್ಲಿ 22 ವರ್ಷದ ಯುವತಿಯ ಮೃತದೇಹದೊಂದಿಗೆ 7 ವರ್ಷಗಳ ಕಾಲ ಮಲಗಿದ್ದರಂತೆ(Viral News). ಏನಿದು ಕಥೆ ಅಂತೀರಾ, ಮುಂದೆ ಓದಿ.
ಕಾರ್ಲ್ ಟಾಂಜ್ಲರ್ ಮತ್ತು ಎಲೆನಾ ಡಿ ಹೊಯೊಸ್ ಅವರ ಈ ಕಥೆ ಕೇಳಿದ್ರೆ ಖಂಡಿತಾ ನೀವು ಅಚ್ಚರಿಪಡುವಿರಿ. 1931 ರಲ್ಲಿ, 22 ವರ್ಷದ ಯುವತಿ ಎಲೆನಾ ಡಿ ಹೊಯೊಸ್ ಅವರನ್ನು ಫ್ಲೋರಿಡಾದ ಕೀ ವೆಸ್ಟ್‌ನಲ್ಲಿರುವ ಮೆರೈನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಸಮಯದಲ್ಲಿ ಅವರಿಗೆ ಕ್ಷಯರೋಗವಿತ್ತು, ಇದು ಮಾರಕ ಕಾಯಿಲೆಯಾಗಿತ್ತು. ಆ ವೇಳೆ ಕಾರ್ಲ್ ಟಾಂಜ್ಲರ್ ಆಸ್ಪತ್ರೆಯಲ್ಲಿ ರೇಡಿಯೊಲಾಜಿಕ್ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು.
ಟಾಂಜ್ಲರ್, ಯುವತಿಯನ್ನು ಉಳಿಸಲು ಹಲವು ಚಿಕಿತ್ಸೆಗಳನ್ನು ಪ್ರಯತ್ನಿಸಿದರು. ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯ ಟಾಂಜ್ಲರ್ ಯುವತಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. ಎಲೆನಾಗೆ ಪ್ರೇಮ ನಿವೇದನೆ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಆಕೆ ಮಾರಕ ಕಾಯಿಲೆಗೆ ಗುರಿಯಾಗಿದ್ದರಿಂದ ಅದರಲ್ಲಿ ಅವಳಿಗೆ ಆಸಕ್ತಿ ಇರಲಿಲ್ಲ. ಕೊನೆಗೆ ಅಕ್ಟೋಬರ್ 25, 1931 ರಂದು ಎಲೆನಾ ನಿಧನ ಹೊಂದಿದಳು.
ಟಾಂಜ್ಲರ್, ಎಲೆನಾಳ ಅಂತ್ಯಕ್ರಿಯೆಗೆ ಹಣ ನೀಡಿ ದೊಡ್ಡ ಸಮಾಧಿಯನ್ನು ನಿರ್ಮಿಸಿದ. ಎರಡು ವರ್ಷಗಳ ಕಾಲ, ಪ್ರತಿ ರಾತ್ರಿಯೂ ಎಲೆನಾಳ ಸಮಾಧಿಗೆ ಭೇಟಿ ನೀಡುತ್ತಿದ್ದ. ಜೊತೆಗೆ ಉಡುಗೊರೆಗಳನ್ನು ಕೊಂಡೊಯ್ಯುತ್ತಿದ್ದ. 1940ರಲ್ಲಿ ಟಾಂಜ್ಲರ್‌ನು ಎಲೆನಾಳ ಮೃತದೇಹದೊಂದಿಗೆ ವಾಸಿಸುತ್ತಿದ್ದಾನೆ ಎಂಬ ವದಂತಿಗಳು ಹರಡಿತು. ಆಕೆಯ ಸಹೋದರಿ ಅವನನ್ನು ಭೇಟಿ ಮಾಡಿ ಅದು ನಿಜವೆಂದು ಅರಿತುಕೊಂಡರು. ಟಾಂಜ್ಲರ್ 1933ರಲ್ಲಿ ಆಕೆಯ ಶವವನ್ನು ಸಮಾಧಿಯಿಂದ ತೆಗೆದುಕೊಂಡು ಹೋಗಿದ್ದನು. ವಾಸನೆಯನ್ನು ಮರೆಮಾಚಲು ಕೋಟ್ ಹ್ಯಾಂಗರ್, ಮೇಣ, ಸುಗಂಧ ದ್ರವ್ಯಗಳನ್ನು ಬಳಸಿ ದೇಹವನ್ನು ಸಂರಕ್ಷಿಸಿದನು.
