ಉದಯವಾಹಿನಿ, ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆಗಿದ್ದರೂ ಸಿನಿಮಾಗಳಲ್ಲಿ ನಟಿಸುವುದನ್ನ ನಿಲ್ಲಿಸಿಲ್ಲ. ಈ ವರ್ಷವೇ ಅವರು ನಟಿಸಿದ ಹರಿಹರ ವೀರಮಲ್ಲು ಸಿನಿಮಾ ತೆರೆಗೆ ಬಂದಿದೆ. ಪವನ್ ಕಲ್ಯಾಣ್‌ಗೆ ತಮ್ಮ ಸಹೋದರ ಮೆಗಾಸ್ಟಾರ್ ಚಿರಂಜೀವಿ ಬರ್ತ್ಡೇ ವಿಶ್ ಮಾಡಿದ್ದಾರೆ. ಅಣ್ಣನ ಶುಭಾಶಯವನ್ನು ರಿ-ಪೋಸ್ಟ್ ಮಾಡಿರುವ ಪವನ್ ಕಲ್ಯಾಣ್ ಕೃತಜ್ಞತೆ ತಿಳಿಸಿದ್ದಾರೆ.
ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟನಾಗಿ, ಸಾರ್ವಜನಿಕ ಜೀವನದಲ್ಲಿ ಜನಸೇನಾ ನಾಯಕನಾಗಿ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ, ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕಲ್ಯಾಣ್ ಬಾಬು ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ಆ ಭಗವಂತ ಆಯುರ್-ಆರೋಗ್ಯ ಕೊಟ್ಟು ಕಾಪಾಡಲಿ” ಎಂದು ಪವನ್ ಕಲ್ಯಾಣ್‌ಗೆ ಚಿರಂಜೀವಿ ಶುಭ ಹಾರೈಸಿದ್ದಾರೆ.
ಇನ್ನು ತಮ್ಮ ಸಹೋದರ ಚಿರಂಚೀವಿ ಅವರ ವಿಶ್‌ ಅನ್ನು ರಿ-ಪೋಸ್ಟ್ ಮಾಡಿರುವ ನಟ ಪವನ್ ಕಲ್ಯಾಣ್. “ನನ್ನ ಹಿರಿಯ ಸಹೋದರ ಪದ್ಮವಿಭೂಷಣ ಶ್ರೀ ಚಿರಂಜೀವಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನ ಅರ್ಪಿಸುತ್ತೇನೆ. ನನ್ನ ಜೀವನದಲ್ಲಿ ನನ್ನ ಮಾರ್ಗದರ್ಶಕ ಮತ್ತು ತಂದೆ ಸಮಾನರಾಗಿದ್ದೀರಿ. ನಿಮ್ಮ ಆಶೀರ್ವಾದ, ಪ್ರೀತಿ ಮತ್ತು ವಾತ್ಸಲ್ಯ ಹಾಗೂ ನಿಮ್ಮ ಶುಭ ಹಾರೈಕೆಗಳು ನನಗೆ ತುಂಬಾ ಸಂತೋಷ ನೀಡಿದೆ. ನೀವು ನನಗೆ ಕಲಿಸಿದ ಸೇವೆಯೇ ಜನ ಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಸ್ಫೂರ್ತಿ. ನೀವು ಯಾವಾಗಲೂ ನನಗೆ ಮಾರ್ಗದರ್ಶಕರಾಗಿ ನನ್ನೊಂದಿಗೆ ಇರಬೇಕು” ಎಂದು ಅಣ್ಣನಿಗೆ ಧನ್ಯವಾದವನ್ನ ಹೇಳಿದ್ದಾರೆ ಪವನ್ ಕಲ್ಯಾಣ್.

Leave a Reply

Your email address will not be published. Required fields are marked *

error: Content is protected !!