ಉದಯವಾಹಿನಿ, ನವದೆಹಲಿ: 2009ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಮುಂಬೈ ಇಂಡಿಯನ್ಸ್‌ (Mumbai Indians) ತಂಡದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದ ಘಟನೆಯನ್ನು ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಸ್ಮರಿಸಿಕೊಂಡಿದ್ದಾರೆ. 2008ರ ಉದ್ಘಾಟನಾ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಬಿನ್‌ ಉತ್ತಪ್ಪ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಈ ಆವೃತ್ತಿಯಲ್ಲಿ ಅವರು ಆಡಿದ 14 ಇನಿಂಗ್ಸ್‌ಗಳಿಂದ 35.55ರ ಸರಾಸರಿ ಮತ್ತು 114.69ರ ಸ್ಟ್ರೈಕ್‌ ರೇಟ್‌ನಲ್ಲಿ 320 ರನ್‌ಗಳನ್ನು ಗಳಿಸಿದ್ದರು. 48 ರನ್‌ ಇವರ ಅಂದಿನ ಸೀಸನ್‌ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.ಇತ್ತೀಚೆಗೆ ಫಸ್ಟ್‌ ಅಂಪೈರ್‌ ಯೂಟ್ಯೂಬ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ರಾಬಿನ್‌ ಉತ್ತಪ್ಪ, 2008ರ ಐಪಿಎಲ್‌ ಟೂರ್ನಿಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ಸೀಸನ್‌ ಬಳಿಕ ನನ್ನನ್ನು ಹಾಗೂ ಮನೀಷ್‌ ಪಾಂಡೆ ಅವರನ್ನು ಆರ್‌ಸಿಬಿಗೆ ಕಳುಹಿಸಲು ಆಸಕ್ತಿಯನ್ನು ಹೊಂದಿದ್ದರು. ಮನೀಷ್‌ ಪಾಂಡೆ ಅವರನ್ನು ಆರ್‌ಸಿಬಿಗೆ ಕಳುಹಿಸಿದ ಜಹೀರ್‌ ಖಾನ್‌ ಅವರನ್ನು ಕರೆಯಿಸಿಕೊಳ್ಳಲು ನಿರ್ಧರಿಸಿದ್ದರು.
“ಅವರು ಜಹೀರ್ ಖಾನ್ ಅವರನ್ನು ಬೆಂಗಳೂರಿನಿಂದ ಮುಂಬೈಗೆ ಕರೆತರಲು ಬಯಸಿದ್ದರು ಮತ್ತು ನನ್ನನ್ನು ಮತ್ತು ಮನೀಶ್ ಪಾಂಡೆಯನ್ನು ಬೆಂಗಳೂರಿಗೆ ಕಳುಹಿಸಲು ಬಯಸಿದ್ದರು. ಅದು ಮಾಲೀಕರ ನಡುವಿನ ಒಪ್ಪಂದ ಎಂದು ನಾನು ಭಾವಿಸುತ್ತೇನೆ. ನನಗೆ ಗೊತ್ತಿಲ್ಲ. ಅದರ ಒಳಭಾಗ ನನಗೆ ತಿಳಿದಿಲ್ಲ. ನಾನು ಕ್ರಿಕೆಟ್ ಪ್ರೀತಿಗಾಗಿ ಮಾತ್ರ ಕ್ರಿಕೆಟ್ ಆಡಿದ್ದೇನೆ ಮತ್ತು ಈ ಮನಸ್ಥಿತಿಯಲ್ಲಿ ನಾನು ಅಂದು ಇದ್ದೆ,” ಎಂದು ಹೇಳಿದ್ದಾರೆ. ರಾಬಿನ್‌ ಉತ್ತಪ್ಪ ಆರ್‌ಸಿಬಿ ಪರ ಎರಡು ಋತುಗಳಲ್ಲಿ (2009 ಮತ್ತು 2010) ಆಡಿದ 31 ಪಂದ್ಯಗಳಿಂದ 23.87ರ ಸರಾಸರಿ ಹಾಗೂ 141.49ರ ಸ್ಟ್ರೈಕ್ ರೇಟ್‌ನೊಂದಿಗೆ 549 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!