ಉದಯವಾಹಿನಿ, ರಾಂಪುರ್‌ಹತ್: ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ರಾಂಪುರ್‌ಹತ್‌ನ ಬರಮೇಸಿಯಾ ಗ್ರಾಮದಲ್ಲಿ 13 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರು ಘಟನೆ ನಡೆದಿದೆ. ಮೃತ ಬಾಲಕಿ 7ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಈ ಹಿಂದೆ ಆಕೆಯ ಶಿಕ್ಷಕನಾಗಿದ್ದ ಕೆಲಸ ಮಾಡಿದ್ದ ಮನೋಜ್ ಪಾಲ್ ಎಂಬಾತನೇ ದೌರ್ಜನ್ಯ ಎಸಗಿ, ಕೊಲೆಗೈದಿದ್ದಾನೆ.
ಬಾಲಕಿಯ ಕುಟುಂಬದವರ ಪ್ರಕಾರ ಈಗಾಗಲೇ ವಿವಾಹಿತನಾಗಿದ್ದ ಮನೋಜ್ ಪಾಲ್, ಹಲವಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ. ಅಷ್ಟೇಅಲ್ಲದೆ ಕಳೆದ ಕೆಲ ತಿಂಗಳಿಂದ ಬಾಲಕಿಗೆ ಕಿರುಕುಳ ನೀಡುತ್ತಿದ್ದ. “ನೀನು ಬೆಳೆದ ಮೇಲೆ ನಿನ್ನನ್ನು ಮದುವೆಯಾಗುವೆ, ಬಿಡುವುದಿಲ್ಲ” ಎಂದು ಆಕೆಗೆ ಹೇಳುತ್ತಿದ್ದ ಎಂದು ಪೋಷಕರು ತಿಳಿಸಿದ್ದಾರೆ. ಬಾಲಕಿ ಶಾಲೆ ಮತ್ತು ಟ್ಯೂಶನ್‌ಗೆ ಹೋಗುವಾಗ ಶಿಕ್ಷಕ ಆಕೆಯನ್ನು ತಡೆಯುತ್ತಿದ್ದ ಎಂದು ಆಕೆಯ ಸಹಪಾಠಿಗಳು ತಿಳಿಸಿದ್ದಾರೆ.
ಆ. 28ರಂದು ಬಾಲಕಿ ಟ್ಯೂಶನ್‌ಗೆಂದು ಮನೆಯಿಂದ ಹೊರಟು ವಾಪಸಾಗಲಿಲ್ಲ. ಕುಟುಂಬವು ತಕ್ಷಣ ಪೊಲೀಸರಿಗೆ ದೂರು ನೀಡಿತಾದರೂ, ಪೊಲೀಸರು “ಬಾಲಕಿಯೇ ಓಡಿಹೋಗಿರಬಹುದು” ಎಂದು ಲಘುವಾಗಿ ತೆಗೆದುಕೊಂಡರು. ಸೆಪ್ಟೆಂಬರ್ 1ರಂದು ಪಾಲ್‌ನನ್ನು ವಿಚಾರಣೆಗೆ ಒಳಪಡಿಸಿದರಾದರೂ, ಬಿಡುಗಡೆ ಮಾಡಲಾಯಿತು. ಆದರೆ, ಹೊಸ ಸುಳಿವುಗಳ ಆಧಾರದ ಮೇಲೆ ಸೆಪ್ಟೆಂಬರ್ 16ರಂದು ಆತನನ್ನು ಮತ್ತೆ ಬಂಧಿಸಲಾಯಿತು.
