ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಪವರ್ ಶೇರಿಂಗ್ ಚರ್ಚೆ ಆಗಿಲ್ಲ. ಪಕ್ಷದ ಯಾರೂ ಈ ಬಗ್ಗೆ ಮಾತಾಡುವಂತಿಲ್ಲ ಅಂತ ಹೈಕಮಾಂಡ್ ನಾಯಕರು ಹೇಳಿದರೂ ರಾಜ್ಯ ನಾಯಕರ ವ್ಯಾಖ್ಯಾನಗಳು ಮುಂದುವರಿದಿವೆ. 2013-18ರ ಸಿದ್ದರಾಮಯ್ಯ ಬೇರೆ.. ಇವಾಗಿನ ಸಿದ್ದರಾಮಯ್ಯ ಬೇರೆ. ಆಗ ಪಾದರಸದಂತೆ ಕೆಲಸ ಇರೋದು. ಈಗ ಅವರಿಗೆ ಬೇರೆ ಬೇರೆ ರೀತಿಯ ಒತ್ತಡ ಇದೆ. ಕೆಲವು ಹೇಳಲಾಗದೇ ಇರುವಂತಹ ಒತ್ತಡ ಇದೆ ಅಂದಿದ್ದಾರೆ. ಜೊತೆಗೆ, ನವೆಂಬರ್‌ನಲ್ಲಿ ಯಾವುದೇ ಬದಲಾವಣೆ ಆಗಲ್ಲ ಅಂದಿದ್ದಾರೆ.
ಸಚಿವ ಜಮೀರ್ ಮಾತಾಡಿ, ನವೆಂಬರ್‌ಗೆ ಯಾವ ಕ್ರಾಂತಿ ಇಲ್ಲ, 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರ್ತಾರೆ ಅಂದಿದ್ದಾರೆ. ಅದಾಗ್ಯೂ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಬಯಸುತ್ತೇನೆ ಅಂತಲೂ ಹೇಳಿದ್ದಾರೆ. ಈ ಮಧ್ಯೆ, ಸಿದ್ದರಾಮಯ್ಯನವರೇ 5 ವರ್ಷವೂ ಸಿಎಂ ಆಗಿರ್ತಾರೆ ಅಂತ ಸಚಿವ ಮಹದೇವಪ್ಪ ಹಾಗೂ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
