ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ 1.2 ಕೋಟಿ (1,02,38,657 ಮನೆಗಳು) ಮನೆಗಳ ಸಮೀಕ್ಷೆ ದಾಟಿದೆ. ಇವತ್ತು ಒಂದೇ ದಿನ 9,13,892 ಮನೆಗಳ ಸರ್ವೆ ಆಗಿದೆ. ಬೆಂಗಳೂರಿನಲ್ಲಿ 22,141 ಮನೆಗಳ ಜಾತಿಗಣತಿ ಆಗಿದೆ.
ಬೆಂಗಳೂರಿನಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಮೊದಲ ದಿನವೇ ಗೊಂದಲದ ಗೂಡಾಗಿತ್ತು. ಮೊದಲ ದಿನವೇ ಗಣತಿದಾರರಿಗೆ ಸಮೀಕ್ಷೆ ಆ್ಯಪ್ ಗೊಂದಲ, ಸರ್ವರ್ ಸಮಸ್ಯೆ, ಲೊಕೇಷನ್ ಕಿರಿಕಿರಿ ಎದುರಾಗಿತ್ತು. ಹಲವಡೆ ಐಡಿ ಕಾರ್ಡ್ ಕಿಟ್ ವಿತರಣೆಯೂ ವಿಳಂಬವಾಗಿತ್ತು. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಂತೂ ಗಣತಿದಾರರು ಪ್ರತಿಭಟನೆಗೆ ಇಳಿದಿದ್ರು.
ಬೆಂಗಳೂರಿನ ಹಲವಡೆ ಸಮೀಕ್ಷೆದಾರರು ಮನೆಗೆ ತೆರಳಿದಾಗ ವೈಯಕ್ತಿಕ ಮಾಹಿತಿ ಯಾಕೆ ಕೊಡಬೇಕು..? ಮಾಹಿತಿ ಕೊಟ್ರೇ ಅದು ಸುರಕ್ಷಿತನಾ..? ಅಂತ ಅಸಮಾಧಾನ ವ್ಯಕ್ತಪಡಿಸಿ ಗಣತಿದಾರರ ವಿರುದ್ಧ ತಿರುಗಿಬಿದ್ರು. ಪ್ರಮುಖವಾಗಿ ಆಧಾರ್ ಕಾರ್ಡ್, ಬ್ಯಾಂಕ್ ವಿವರ, ಚರಾಸ್ತಿ-ಸ್ಥಿರಾಸ್ತಿ ವಿವರ ಕುಟುಂಬದ ಸಾಲ, ಆದಾಯ ತೆರಿಗೆ ಪಾವತಿದಾರರು, ಕುರಿ-ಎಮ್ಮೆ-ಕೋಣ ಸಾಕಿದ್ದೀರಾ..? ಹೀಗೆ ಅನೇಕ ಪ್ರಶ್ನೆಗಳಿಗೆ ಇದೇನು ಆಸ್ತಿ ಸಮೀಕ್ಷೆನಾ ಅಂತ ಜನ ಹೈರಾಣಾಗಿ ಆಕ್ರೋಶ ವ್ಯಕ್ತಪಡಿಸಿದ್ರು.
