ಉದಯವಾಹಿನಿ, ನವದೆಹಲಿ: ರೈಲು ಪ್ರಯಾಣ ಪ್ರಿಯರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್ ನೀಡಿದೆ. ಇದೀಗ ಬುಕ್ ಆದ ಟಿಕೆಟ್‌ನ ದಿನಾಂಕ ಬದಲಾವಣೆಗೆ ಜನವರಿಯಿಂದ ಅವಕಾಶ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ಒಮ್ಮೆ ರೈಲ್ವೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣದ ದಿನಾಂಕ ಬದಲಾವಣೆಗೆ ಅವಕಾಶ ಇರಲಿಲ್ಲ. ಆದರೆ ಇದೀಗ ಬುಕ್ ಆದ ರೈಲ್ವೆ ಟಿಕೆಟ್ ದಿನಾಂಕ ಬದಲಿಸಲು ಅವಕಾಶ ಇರಲಿದೆ.
ಮೊದಲೆಲ್ಲ ಟಿಕೆಟ್ ಬುಕಿಂಗ್ ಆದ್ರೆ, ದಿನಾಂಕ ಬದಲಾವಣೆಗೆ ಮೊದಲಿನ ಬುಕಿಂಗ್ ರದ್ದು ಮಾಡಿ, ನಂತರ ಹೊಸ ಟಿಕೆಟ್ ಬುಕಿಂಗ್ ಮಾಡಬೇಕಿತ್ತು. ಆದರೆ ರೈಲ್ವೆ ಇಲಾಖೆ ಈ ನಿಯಮ ಬದಲಾವಣೆಗೆ ಮುಂದಾಗಿದೆ. ದಿನಾಂಕ ಬದಲಾವಣೆಗೆ ಯಾವುದೇ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ತಿಳಿಸಿದೆ.ಅಲ್ಲದೇ ರದ್ದತಿ ವೇಳೆ ಆಗುವ ಹಣ ಕಡಿತದಂತೆ ಇಲ್ಲಿ ಆಗುವುದಿಲ್ಲ ಎನ್ನುವ ಮೂಲಕ ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ಇದ್ದ ನಿಯಮ ಸಡಿಲಿಕೆಗೆ ಇಲಾಖೆ ಮುಂದಾಗಿದೆ.
