ಉದಯವಾಹಿನಿ, ಅನಾನಸ್ ಕೇವಲ ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ಹಣ್ಣಲ್ಲ. ಇದು ಆರೋಗ್ಯಕ್ಕೆ ವರದಾನವಾಗಿದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಈ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ) ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿದ್ದರೂ, ಮಾರುಕಟ್ಟೆಯಲ್ಲಿ ಅನಾನಸ್ ಖರೀದಿಸಲು ಅನೇಕ ಮಂದಿ ಹಿಂಜರಿಯುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಅದನ್ನು ಕತ್ತರಿಸುವಾಗ ಉಂಟಾಗುವ ಕಿರಿಕಿರಿ. ಹೌದು, ದಪ್ಪ, ಒರಟಾದ ತೊಗಟೆ ಮತ್ತು ಮುಳ್ಳಿನ ಹೊರ ಪದರವನ್ನು ಕತ್ತರಿಸುವುದು ತುಂಬಾ ಕಷ್ಟಕರವಾದ ಕೆಲಸವೆಂದು ಅನೇಕ ಮಂದಿ ಭಾವಿಸುತ್ತಾರೆ.
ಆದರೆ ವಾಸ್ತವವಾಗಿ ಈ ಟ್ರಿಕ್​​ ತಿಳಿದುಕೊಂಡಿದ್ದರೆ, ನೀವು ಅನಾನಸ್ ಸಿಪ್ಪೆಯನ್ನು ಸುಲಭವಾಗಿ ಕತ್ತರಿಸಬಹುದು. ಇದಕ್ಕಾಗಿ ಸ್ವಲ್ಪ ಎಚ್ಚರಿಕೆ ಮತ್ತು ಈ ಸರಳ ಹಂತಗಳನ್ನು ಅನುಸರಿಸಿದರೆ ಮನೆಯಲ್ಲಿಯೇ ನಿಮಿಷಗಳಲ್ಲಿ ಅಚ್ಚುಕಟ್ಟಾಗಿ, ರಸಭರಿತವಾದ ಅನಾನಸ್​ ಪೀಸ್​ಗಳನ್ನು ಕತ್ತರಿಸಬಹುದು. ಹಾಗಾದ್ರೆ ಅನಾನಸ್ ಕತ್ತರಿಸುವ ಸರಿಯಾದ ವಿಧಾನ ಯಾವುದು ಅಂತ ತಿಳಿಯೋಣ ಬನ್ನಿ.
ಮೊದಲು ‘ಪರಿಪೂರ್ಣ’ ಅನಾನಸ್ ಅನ್ನು ಆರಿಸಿ: ಅನಾನಸ್ ಖರೀದಿಸುವಾಗ ಅದು ತಿಳಿ ಹಳದಿ ಮತ್ತು ಸ್ವಲ್ಪ ಹಸಿರು ಬಣ್ಣದ್ದಾಗಿರಬೇಕು. ಅತ್ಯಂತ ಮುಖ್ಯವಾದ ವಿಚಾರವೆಂದರೆ ಅದರ ಕೆಳಭಾಗದಿಂದ ಉತ್ತಮವಾದ ಸಿಹಿ ಸುವಾಸನೆ ಬರಬೇಕು. ಹಾಗಿದ್ದಲ್ಲಿ ಹಣ್ಣು ತಿನ್ನಲು ಉತ್ತಮವಾಗಿದೆ ಎಂದರ್ಥ.
ಮೇಲ್ಭಾಗ ಮತ್ತು ಕೆಳಭಾಗವನ್ನು ಕತ್ತರಿಸಿ ತೆಗೆಯಿರಿ: ತೀಕ್ಷ್ಣವಾದ, ಬಲಿಷ್ಠವಾದ ಚಾಕುವಿನಿಂದ, ಮೇಲಿನ ಎಲೆ ಮತ್ತು ಅನಾನಸ್‌ನ ಕೆಳಗಿನ ಭಾಗವನ್ನು (ಸುಮಾರು ಅರ್ಧ ಇಂಚು) ಕತ್ತರಿಸಿ. ಇದು ಅನಾನಸ್ ಅನ್ನು ಕತ್ತರಿಸುವಾಗ ಅದನ್ನು ನೆಲದ ಮೇಲೆ ನೇರವಾಗಿ ನಿಲ್ಲಿಸಲು ಸಹಾಯಕವಾಗಿದೆ.

Leave a Reply

Your email address will not be published. Required fields are marked *

error: Content is protected !!