ಉದಯವಾಹಿನಿ, ಕಾಂತಾರ: ಚಾಪ್ಟರ್ 1 ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಈ ವರ್ಷದ ಸೂಪರ್ ಹಿಟ್ ಚಲನಚಿತ್ರ ಅಕ್ಟೋಬರ್ 31 ರಂದು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡುಗಡೆ ಮಾಡಲಾಗುವುದು ಎಂದು ಅಮೆಜಾನ್ ಪ್ರೈಮ್ ಅಧಿಕೃತವಾಗಿ ತಿಳಿಸಿದೆ.
ಕಾಂತಾರದ ಎಲ್ಲಾ ಭಾಷೆಗಳ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪಡೆದುಕೊಂಡಿದ್ದರೂ ಹಿಂದಿ ಭಾಷೆಗೆ ಡಬ್ ಆಗಿರುವ ಸಿನಿಮಾ ರಿಲೀಸ್ ಆಗುತ್ತಿಲ್ಲ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈಗಲೂ ಕಾಂತಾರ ಟಿಕೆಟ್‌ಗಳು ಸೇಲ್ ಆಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಬಿಡುಗಡೆಯಾಗಿ 25 ದಿನ ಕಳೆದರೂ ಕಾಂತಾರ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ನಾಲ್ಕನೇ ವಾರಕ್ಕೆ ಕಾಲಿಟ್ಟರೂ ಈಗಲೂ ಬುಕ್‌ಮೈಶೋದಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಹಿಂದಿಯಲ್ಲಿ ಮೊದಲ ವಾರ 110.10 ಕೋಟಿ ರೂ. ಗಳಿಸಿದರೆ ಎರಡನೇ ವಾರದಲ್ಲಿ 54.57 ಕೋಟಿ ರೂ., ಮೂರನೇ ವಾರದಲ್ಲಿ 28.95 ಕೋಟಿ ರೂ., ನಾಲ್ಕನೇ ವಾರದಲ್ಲಿ 11.94 ಕೋಟಿ ರೂ. ಗಳಿಸುವ ಮೂಲಕ ಒಟ್ಟು 205.56 ಕೋಟಿ ರೂ. ಗಳಿಸಿದೆ.
