ಉದಯವಾಹಿನಿ, ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ವಾಸಿಸುವ ಹರ್ಜೀತ್ ಸಿಂಗ್ರನ್ನು ಭಾರತೀಯ ವ್ಲಾಗರ್ ಪುಲ್ಕಿತ್ ಚೌಧರಿ ಭೇಟಿಯಾಗಿದ್ದು, ಅವರನ್ನು “ಅಫ್ಘಾನಿಸ್ತಾನದ ಕೊನೆಯ ಸಿಖ್” ಎಂದು ವರ್ಣಿಸಿದ್ದಾರೆ. ಇವರಿಬ್ಬರ ಭೇಟಿಯ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡರೂ ನಂಬಿಕೆ ಮತ್ತು ಧೈರ್ಯದಿಂದ ಜೀವಿಸುತ್ತಿರುವ ವ್ಯಕ್ತಿಯ ಕಥೆಯನ್ನು ಜನರ ಮುಂದಿಟ್ಟಿದ್ದಾರೆ.
ಒಂದು ಸಮಯದಲ್ಲಿ ಸಾವಿರಾರು ಸಿಖ್ಖರು ವಾಸಿಸುತ್ತಿದ್ದ ಅಫ್ಘಾನಿಸ್ತಾನದಲ್ಲಿ, ಕಾಲ ಕ್ರಮೇಣ ನಡೆದ ಯುದ್ಧ, ವಲಸೆ ಮತ್ತು ಹಿಂಸಾಚಾರದಿಂದ ಅನೇಕ ಕುಟುಂಬಗಳು ದೇಶ ತೊರೆದವು. ಈ ಭೇಟಿಯ ಮೂಲಕ ಪುಲ್ಕಿತ್ ಅಲ್ಲಿ ಇನ್ನೂ ಉಳಿದುಕೊಂಡಿರುವ ಒಬ್ಬ ಸಿಖ್ ವ್ಯಕ್ತಿಯ ಜೀವನಾನುಭವವನ್ನು ಇತಿಹಾಸದ ಪುಟಗಳಲ್ಲಿ ಸೇರಿಸಲು ಪ್ರಯತ್ನಿಸಿದ್ದಾರೆ.
‘ಜಗತ್ತಿಗೆ ನನ್ನ ಕಥೆ ತಿಳಿಯಲಿ’ ಪುಲ್ಕಿತ್ ಅವರು ಎಂದು ಶೀರ್ಷಿಕೆಯಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಹರ್ಜೀತ್‌ರನ್ನು ಭೇಟಿಯಾಗಿ ಚಿತ್ರೀಕರಣಕ್ಕೆ ಅನುಮತಿ ಕೇಳಿದಾಗ, ಮೊದಲು ಅವರು ಭಯಗೊಂಡು ನಿರಾಕರಿಸುತ್ತಾರೆ. ಬಳಿಕ, ಪುಲ್ಕಿತ್ ತಾನೊಬ್ಬ ಭಾರತೀಯ ಎಂದು ದಾಖಲೆಗಳನ್ನು ತೋರಿಸಿದಾಗ ಹರ್ಜೀತ್ ಮುಗುಳ್ನಗುತ್ತಾ, “ನೀವು ವಿಡಿಯೋ ಮಾಡಿ. ಜಗತ್ತಿಗೆ ನನ್ನ ಕಥೆ ತಿಳಿಯಲಿ,” ಎಂದರ
