ಉದಯವಾಹಿನಿ, ಮ್ಯಾನ್ಮಾರ್: ಸೈಬರ್ ವಂಚನೆಗೆ ಸಿಲುಕಿದ್ದ 270 ಭಾರತೀಯ ನಾಗರಿಕರನ್ನು ಥಾಯ್ಲ್ಯಾಂಡ್‌ನ ಮೇ ಸಾಟ್ ಪಟ್ಟಣದಿಂದ ರಕ್ಷಿಸಿದ ಭಾರತ ಸೇನೆ ಅವರನ್ನು ಗುರುವಾರ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ, ಅವರು ವಿದೇಶಿ ಉದ್ಯೋಗಗಳ ಆಮಿಷಕ್ಕೆ ಬಲಿಯಾಗಿ ಗ್ಲೋಬಲ್ ಆನ್ಲೈನ್ ಫ್ರಾಡ್ ಕಾರ್ಯಾಚರಣೆಗಳಲ್ಲಿ ತೊಡಗಿಸಲಾಗಿತ್ತು. ಉದ್ಯೋಗ ಸಿಗುವ ಭರವಸೆಯೊಂದಿಗೆ ಥೈಲ್ಯಾಂಡ್‌ಗೆ ಹೋಗಿದ್ದ ಭಾರತೀಯರನ್ನು ಥೈಲ್ಯಾಂಡ್‌ನಿಂದ ಮ್ಯಾನ್ಮಾರ್‌ಗೆ ಅಕ್ರಮವಾಗಿ ಸಾಗಿಸಲಾಗಿತ್ತು. ಅದಾದ ಬಳಿಕ ಉದ್ಯೋಗ ನೀಡದೆ ಭಾರತೀಯರಿಗೆ ಮೋಸ ಮಾಡಲಾಗಿತ್ತು. ಜೊತೆಗೆ ಅಕ್ರಮ ಮಾನವ ಕಳ್ಳ ಸಾಗಾಣಿಕೆ ಯತ್ನ ಕೂಡ ನಡೆದಿತ್ತು ಎನ್ನಲಾಗಿದೆ
ಈ ಹಿನ್ನಲೆಯಲ್ಲಿ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಿ ಗುರುವಾರ ಥೈಲ್ಯಾಂಡ್‌ನ ಮೇ ಸೋಟ್‌ನಿಂದ ಭಾರತೀಯ ವಾಯುಪಡೆಯ (ಐಎಎಫ್) ವಿಮಾನದ ಮೂಲಕ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ. ಅಲ್ಲದೇ ‘ವಂಚನೆಗೊಳಗಾದ ಭಾರತೀಯ ಜನರನ್ನು ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಗರಣ ಕೇಂದ್ರಗಳಲ್ಲಿ ಸೈಬರ್ ಅಪರಾಧ ಮತ್ತು ಇತರ ವಂಚನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಿಲುಕಲ್ಪಟ್ಟಿದ್ದರು’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
