ಉದಯವಾಹಿನಿ, ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿ ಆಗ್ತಿರೋ ಕರಾವಳಿ ಸಿನಿಮಾ ತಂಡಕ್ಕೆ ಸದ್ಯ ಹೊಸ ಕಲಾವಿದೆಯ ಸೇರ್ಪಡೆ ಆಗಿದೆ. ಕರಾವಳಿ ಸಿನಿಮಾತಂಡಕ್ಕೆ ಮಹಾವೀರನಾಗಿ ರಾಜ್ ಬಿ.ಶೆಟ್ಟಿ ಸೇರಿಕೊಂಡಿದ್ರು ಈಗ ರಾಜ್ ಬಿ ಜೊತೆಯಾಗಿ ಕನ್ನಡದ ಭರವಸೆಯ ನಟಿ ಸುಷ್ಮಿತಾ ಭಟ್ ಅಭಿನಯ ಮಾಡುತ್ತಿದ್ದಾರೆ. ಸುಷ್ಮಿತಾ ಭಟ್ ಎರಡು ಸಿನಿಮಾದಲ್ಲಿ ನಟಿಸಿದ್ದು ಕರಾವಳಿ ಅವರ ಮೂರನೇ ಸಿನಿಮಾ.ಸೋಷಿಯಲ್ ಮಿಡಿಯಾದಲ್ಲಿ ಫೋಟೋ ಶೂಟ್ ಗಳ ಮೂಲಕವೇ ಸದ್ದು ಮಾಡ್ತಿದ್ದ ಸುಷ್ಮಿತಾ ಭಟ್ ಈಗ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.ಸಿನಿಮಾ ತಂಡ ಸುಷ್ಮಿತಾ ಅವರ ಪಾತ್ರದ ಪೊಸ್ಟರ್ ರಿಲೀಸ್ ಮಾಡಿದೆ.
ಪಕ್ಕ ಮಂಗಳೂರಿನ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಸುಷ್ಮಿತಾ ಕರಾವಳಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.ಕರಾವಳಿ ಚಿತ್ರತಂಡ ಸುಷ್ಮಿತಾ ಅವ್ರನ್ನ ಪಾತ್ರಕ್ಕಾಗಿ ಅಪ್ರೋಚ್ ಮಾಡಿದಾಗ ಸುಷ್ಮಿತಾ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಕರಾವಳಿ ಪಾತ್ರ ಒಪ್ಪಿಕೊಳ್ಳಲು ಮೊದಲ ಕಾರಣ ರಾಜ್ ಬಿ ಶೆಟ್ಟಿ ಅಂತಾರೆ ಸುಷ್ಮಿತಾ. ರಾಜ್ ಬಿ ಅವರಿಂದ ತುಂಬಾ ಕಲಿಯಬಹುದು ಅನ್ನೋ ಉದ್ದೇಶದಿಂದಲೇ ಈ ಸಿನಿಮಾ ಒಪ್ಪಿಕೊಂಡೆ ಚಿತ್ರೀಕರಣ ಮಾಡಿದ್ದು ಕಡಿಮೆ ದಿನಗಳು ಆದರೂ ಕೂಡ ಸಾಕಷ್ಟು ಕಲಿತಿದ್ದೇನೆ. ರಾಜ್ ಬಿ ಶೆಟ್ಟಿ ಪವರ್ ಹೌಸ್ ಇದ್ದಂಗೆ ಅವರಿಗೆ ಸಖತ್ ಎನರ್ಜಿ ಇದೆ. ಸೆಟ್ ನಲ್ಲಿ ಯಾವಾಗಲೂ ಆಕ್ಟಿವ್ ಆಗಿರ್ತಾರೆ. ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ ಎಂದಿದ್ದಾರೆ.
