ಉದಯವಾಹಿನಿ, ನವದೆಹಲಿ: ಕಳೆದ ಪ್ರಾರಂಭವಾದ ಇಂಡಿಗೋ ವಿಮಾನಯಾನದಲ್ಲಿನ ತೊಂದರೆಗಳು ವಾರಂತ್ಯದವರೆಗೂ ಮುಂದುವರಿದಿದೆ. ಸುಮಾರು ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದು ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಹುಡುಕಲು ಇಂಡಿಗೋ ಒದ್ದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ಮಧ್ಯ ಪ್ರವೇಶಿಸಿದೆ. ಇಂಡಿಗೋ ವಿಮಾನಗಳು ರದ್ಧತಿಗೆ ಎದುರಾಗಿರುವ ಅಡೆತಡೆಗಳ ನಿವಾರಣೆಗೆ ತನಿಖಾ ಸಮಿತಿಯನ್ನು ಸ್ಥಾಪಿಸಿದೆ. ಅಲ್ಲದೇ ವಿಮಾನಯಾನ ಸಂಸ್ಥೆಯ ಜಾರಿಗೊಳಿಸಿರುವ ಹೊಸ ಮಾನದಂಡಗಳನ್ನು ಸಧ್ಯ ಸ್ಥಗಿತಗೊಳಿಸಲಾಗಿದೆ.
ಮಾರುಕಟ್ಟೆಯಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುವ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಶುಕ್ರವಾರ ಸಾವಿರಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇದರಿಂದ ವಾರಂತ್ಯದಲ್ಲೂ ಇಂಡಿಗೋ ಸಮಸ್ಯೆ ನಿವಾರಣೆಯಾಗುವ ಲಕ್ಷಣ ಕಂಡು ಬಂದಿಲ್ಲ. ದೇಶಾದ್ಯಂತ ಲಕ್ಷಾಂತರ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಇಂಡಿಗೋ ಕಾರ್ಯಾಚರಣೆಯ ಅತ್ಯಂತ ಕೆಟ್ಟ ದಿನವೆಂದು ಸಿಇಒ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
