ಉದಯವಾಹಿನಿ, ರಿಯಾದ್: ಸೌದಿ ಆರೇಬಿಯವು ಮದ್ಯಮಾರಾಟಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ನಿಯಮಗಳನ್ನು ಇನ್ನಷ್ಟು ಸಡಿಲುಗೊಳಿಸಿದ್ದು, 50 ಸಾವಿರ ರಿಯಾಲ್ (12ಲಕ್ಷ ರೂ.)ಗಿಂತಲೂ ಅಧಿಕ ಮಾಸಿಕ ಆದಾಯವನ್ನು ಹೊಂದಿರುವ ವಿದೇಶಿ ಮುಸ್ಲಿಮೇತರ ನಿವಾಸಿಗಳು ಮದ್ಯವನ್ನು ಖರೀದಿಸುವುದಕ್ಕೆ ಅನುಮತಿ ನೀಡಿದೆ.
ಮುಸ್ಲಿಮೇತರ ವಿದೇಶಿಯರು, ರಿಯಾದ್ ನಲ್ಲಿರುವ ದೇಶದ ಏಕೈಕ ಮದ್ಯ ಮಾರಾಟ ಮಳಿಗೆಗೆ ಪ್ರವೇಶವನ್ನು ಪಡೆಯಬೇಕಾದರೆ ಅವರು ತಮ್ಮ ವೇತನ ಪ್ರಮಾಣಪತ್ರವನ್ನು ಪ್ರದರ್ಶಿಸಿ, ಮಾಸಿಕ ಆದಾಯವನ್ನು ದೃಢಪಡಿಸಬೇಕಾಗುತ್ತದೆ ಎಂದು ಗುರುತು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ವಿದೇಶಿ ರಾಜತಾಂತ್ರಿಕರಿಗೆ ಮದ್ಯ ಮಾರಾಟ ಮಾಡುವುದಕ್ಕಾಗಿ ತೆರೆಯಲಾಗಿತ್ತು. ತೀರಾ ಇತ್ತೀಚೆಗೆ ಅದು, ಪ್ರೀಮಿಯಂ ವಾಸ್ತವ್ಯ ಸ್ಥಾನಮಾನವನ್ನು ಪಡೆದಿರುವ ಮುಸ್ಲಿಮೇತರರಿಗೂ ಈ ಮದ್ಯ ಮಳಿಗೆಯನ್ನು ತೆರೆದಿಟ್ಟಿತ್ತು.ದೇಶಾದ್ಯಂತದ ಇತರ ಎರಡು ನಗರಗಳಲ್ಲಿಯೂ ನೂತನ ಮದ್ಯದ ಅಂಗಡಿಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಅಧಿಕೃತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!