ಉದಯವಾಹಿನಿ, ವಾಷಿಂಗ್ಟನ್ : ಅಮೆರಿಕವು ತನ್ನ ಗುಳ್ಳೆನರಿ ಬುದ್ಧಿಯನ್ನು ಮತ್ತೆ ಪ್ರದರ್ಶಿಸಿದೆ. ಭಾರತದ ಸ್ನೇಹಿತ ಎಂದು ಹೇಳಿಕೊಳ್ಳುತ್ತಲೇ ಪಾಕಿಸ್ತಾನಕ್ಕೆ ಭರ್ಜರಿ ಆರ್ಥಿಕ ನೆರವು ಘೋಷಿಸಿದೆ. ತಾನು ನೀಡಿರುವ ಎಫ್-16 ಯುದ್ಧ ವಿಮಾನಗಳನ್ನು ನವೀಕರಿಸಲು 686 ಮಿಲಿಯನ್ ಡಾಲರ್ ನೀಡಲು ಮುಂದಾಗಿದೆ.ಪ್ರಸ್ತಾವಿತ ಪ್ಯಾಕೇಜ್ ಪ್ರಮುಖ ರಕ್ಷಣಾ ಸಲಕರಣೆಗಳಿಗೆ 37 ಮಿಲಿಯನ್ ಡಾಲರ್ ಮತ್ತು ಹೆಚ್ಚುವರಿ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಲಾಜಿಸ್ಟಿಕಲ್ ಬೆಂಬಲಕ್ಕೆ 649 ಮಿಲಿಯನ್ ಡಾಲರ್ ನಿಗದಿ ಮಾಡಲಾಗಿದೆ.
ಅಧಿಸೂಚನೆಯ ಪ್ರಕಾರ, ಏವಿಯಾನಿಕ್ಸ್ ನವೀಕರಣಗಳು, ವಿಮಾನಗಳ ಹಾರಾಟದಲ್ಲಿನ ಮಾರ್ಪಾಡುಗಳು, ಸುರಕ್ಷಿತ ಸಂವಹನ ವ್ಯವಸ್ಥೆಗಳು, ಶತ್ರು ಅಥವಾ ಮಿತ್ರ ವಿಮಾನಗಳು, ಕ್ರಿಪ್ಟೋಗ್ರಾಫಿಕ್ ಅಪ್ಲಿಕೇಶನ್‌ಗಳು, ಮಿಷನ್-ಯೋಜನಾ ವ್ಯವಸ್ಥೆಗಳು, ಪರೀಕ್ಷಾ ಉಪಕರಣಗಳು, ಬಿಡಿಭಾಗಗಳು, ತರಬೇತಿ ಸಾಧನಗಳು, ಸಿಮ್ಯುಲೇಟರ್‌ಗಳು, ಎಂಜಿನಿಯರಿಂಗ್ ಮತ್ತು ಲಾಜಿಸ್ಟಿಕ್ಸ್ ಬೆಂಬಲ ಸೇರಿದಂತೆ ಹಲವು ಸ್ತರದಲ್ಲಿ ಬೆಂಬಲ ನೀಡುತ್ತಿದೆ.
ಅಮೆರಿಕವು ತನ್ನ ನೀತಿಯನುಸಾರ, ಪಾಕಿಸ್ತಾನವು ತನ್ನ ಬ್ಲಾಕ್-52 ಮತ್ತು ಮಿಡ್-ಲೈಫ್ ಅಪ್‌ಗ್ರೇಡ್ F-16 ವಿಮಾನಗಳನ್ನು ಆಧುನೀಕರಿಸಲು ಮತ್ತು ಅಮೆರಿಕದ ಪಾಲುದಾರ ಪಡೆಗಳೊಂದಿಗೆ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಪ್ರಸ್ತಾವಿತ ಆರ್ಥಿಕ ನೆರವು ಪಾಕಿಸ್ತಾನವು ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳಲ್ಲಿ ಅಮೆರಿಕ ಮತ್ತು ಪಾಲುದಾರ ಪಡೆಗಳೊಂದಿಗೆ ಪರಸ್ಪರ ನೆರವಾಗಿದೆ ಎಂದು ಶ್ವೇತಭವನ ತಿಳಿಸಿದೆ.
