ಉದಯವಾಹಿನಿ, ರೋಮ್, ಇಟಲಿ: ಭದ್ರತೆಯನ್ನು ಖಚಿತಪಡಿಸಿಕೊಂಡರೆ ಉಕ್ರೇನ್‌ನಲ್ಲಿ ಹೊಸ ಚುನಾವಣೆಗಳನ್ನು ನಡೆಸಲು ಸಿದ್ಧ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ಘೋಷಿಸಿದ್ದಾರೆ. ರಷ್ಯಾದೊಂದಿಗೆ ಸುಮಾರು ನಾಲ್ಕು ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಕುರಿತು ಪರಿಷ್ಕೃತ ಪ್ರಸ್ತಾವನೆಗಳನ್ನು ಒಂದು ದಿನದೊಳಗೆ ವಾಷಿಂಗ್ಟನ್‌ಗೆ ಕಳುಹಿಸುವ ಸಾಧ್ಯತೆಗಳಿವೆ.ವಾಷಿಂಗ್ಟನ್ ರೂಪಿಸಿದ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೀವ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಡುವೆ ಅಮೆರಿಕದ ಶಾಂತಿ ಒಪ್ಪಂದದ ಮೊದಲ ಕರಡನ್ನು ಉಕ್ರೇನ್‌ನ ಮಿತ್ರರಾಷ್ಟ್ರಗಳು ಟೀಕಿಸಿದ್ದವು.
ಇದು ರಷ್ಯಾಕ್ಕೆ ಅತಿಯಾಗಿ ಅನುಕೂಲ ಮಾಡಿಕೊಡುತ್ತಿದೆ ಎಂದು ಟೀಕಿಸಿದ್ದವು.ನಾವು ಒಪ್ಪಂದದ ವಿಚಾರವಾಗಿಯೇ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಬಗ್ಗೆ ಬುಧವಾರ ಮುಂದುವರಿಯುತ್ತೇವೆ. ಬುಧವಾರ ಹಸ್ತಾಂತರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ವರದಿಗಾರರಿಗೆ ತಿಳಿಸಿದ್ದಾರೆ.
ಅಮೆರಿಕದ ಇತ್ತೀಚಿನ ಪ್ರಸ್ತಾವನೆಗಳನ್ನು ಝೆಲೆನ್ಸ್ಕಿ ಓದಿಲ್ಲ ಎಂದು ಈ ಹಿಂದೆ ಆರೋಪ ಮಾಡಿದ್ದ ಟ್ರಂಪ್, ಪೊಲಿಟಿಕೊಗೆ ನೀಡಿದ ಸಂದರ್ಶನದಲ್ಲಿ, ರಷ್ಯಾ ಈ ಸಂಘರ್ಷದಲ್ಲಿ ಮೇಲುಗೈ ಹೊಂದಿದೆ ಎಂದು ಹೇಳಿದ್ದಾರೆ. ರಷ್ಯಾ ತನ್ನ ನೆರೆಯ ರಾಷ್ಟ್ರವನ್ನು ಆಕ್ರಮಿಸಿದಾಗಿನಿಂದ ಸಮರ ಕಾನೂನಿನಡಿ ಮುಂದೂಡಲ್ಪಟ್ಟ ಚುನಾವಣೆಗಳನ್ನು ತಪ್ಪಿಸಲು ಕೀವ್ ಯುದ್ಧ ತಂತ್ರವನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.ಚುನಾವಣೆ ನಡೆಸಲು ಸಿದ್ಧ: ಝೆಲೆನ್ಸ್ಕಿ: ನಿಮಗೆ ತಿಳಿದಿದೆ, ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಆದರೆ, ಅದು ಇನ್ನು ಮುಂದೆ ಪ್ರಜಾಪ್ರಭುತ್ವವಲ್ಲದ ಹಂತಕ್ಕೆ ತಲುಪುತ್ತದೆ ಎಂದು ಟ್ರಂಪ್ ಹೇಳಿದರು. ಉಕ್ರೇನಿಯನ್ ಕಾನೂನು ಸಮರ ಕಾನೂನಿನ ಅಡಿ ಚುನಾವಣೆಗಳನ್ನು ನಡೆಸುವುದನ್ನು ನಿಷೇಧಿಸುತ್ತದೆ. ಅದೂ ಅಲ್ಲದೇ ಮಾರ್ಚ್ 2024 ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರು ಆಡಿದ ಮಾತುಗಳನ್ನ ಅನುಸರಿಸಿ ಪ್ರತಿಕ್ರಿಯೆ ನೀಡಿರುವ ಝೆಲೆನ್ಸ್ಕಿಹೊಸ ಚುನಾವಣೆ ಆಯೋಜಿಸಲು ಸಿದ್ಧ ಎಂದು ಹೇಳಿದ್ದಾರೆ.
