ಉದಯವಾಹಿನಿ: ಬಾಲಿವುಡ್ ಮೋಸ್ಟ್ ಎಲಿಜಬೆತ್ ಬ್ಯಾಚುಲರ್ ಎಂದೇ ಖ್ಯಾತರಾದ ನಟ ಸಲ್ಮಾನ್ ಖಾನ್  ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿ ಯಲ್ಲಿರುತ್ತಾರೆ. ಕಿಕ್ , ದಬಾಂಗ್, ವಾಂಟೆಡ್, ಮುಜ್ ಸೆ ಶಾದಿ ಕರೋಗಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ‌. ಇವರ ಅಭಿನಯದ ಸಿಕಂದರ್ ಸಿನಿಮಾ ಅಂದು ಕೊಂಡ ಮಟ್ಟಕ್ಕೆ ಯಶಸ್ವಿಯಾಗಿರಲಿಲ್ಲ. ಹಾಗಿದ್ದರೂ ಬಾಲಿವುಡ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಅಂತೆಯೇ ಅವರ ಫೋಟೊ, ಹೆಸರು, ಧ್ವನಿ ಇತ್ಯಾದಿಗಳನ್ನು ಅನುಮತಿ ಇಲ್ಲದೆ ಬೇರೆ ಬೇರೆ ಕಾರಣಕ್ಕಾಗಿ ಬಳಸ ಲಾಗುತ್ತಿದ್ದು ಅಂತವರ ವಿರುದ್ಧ ಶಿಸ್ತು ಬದ್ಧ ಕ್ರಮ ಕೈಗೊಳ್ಳುವಂತೆ ನಟ ಸಲ್ಮಾನ್ ಖಾನ್ ಅವರು ದೆಹಲಿಯ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಚಾರಕ್ಕಾಗಿ ತನ್ನ ಹೆಸರು ಬಳಸಿ ತಮ್ಮ ಉದ್ದೇಶ ಸಾಧಿಸಿಕೊಳ್ಳುವ ಕೆಲವು ವ್ಯಕ್ತಿಗಳನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಮತ್ತು ಇನ್ನು ಮುಂದೆ ಇಂತಹ ನಡೆ ಯಾರು ತೋರದಂತೆ ಕ್ರಮ ಜರಗಿಸಬೇಕೆಂದು ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಕೆಲವು ವ್ಯಕ್ತಿಗಳು, ಸಂಘ -ಸಂಸ್ಥೆಗಳು ತಮ್ಮ ಹೆಸರು, ಭಾವಚಿತ್ರಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುತ್ತಿದ್ದು ಕೃತಕ ಬುದ್ಧಿಮತ್ತೆಯಿಂದ ಅನೇಕ ಕಂಟೆಂಟ್‌ಗಳನ್ನು ಕೂಡ ಬಳಸಿದ್ದಾರೆ. ಇನ್ನು ಮುಂದೆ ತನ್ನ ಹೆಸರು, ಫೋಟೊ ಬಳಸದಂತೆ ನಿರ್ದೇಶನ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ದೆಹಲಿ ಹೈಕೋರ್ಟ್ ಗುರುವಾರದಂದು ಅವರ ಅರ್ಜಿಯ ವಿಚಾರಣೆ ನಡೆಸಿದೆ. ತಮ್ಮ ಐಡೆಂಟಿಟಿಯನ್ನು ಅನಧಿಕೃತವಾಗಿ ಬಳಸುವುದರ ವಿರುದ್ಧ ಸಂಪೂರ್ಣ ಕಾನೂ ನಾತ್ಮಕ ರಕ್ಷಣೆ ಒದಗಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ದಿನದಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ಈ ತರನಾದ ಬಳಕೆ ಮಾಡುವ ಪ್ರಮಾಣ ಹೆಚ್ಚಾಗಿದೆ. ಹೀಗೆ ಫೋಟೊ ಧ್ವನಿ, ಹೆಸರನ್ನು ಬಳಸುವವರು ಬಳಿಕ ಅದನ್ನು ಎಐ ನಿಂದ ಎಡಿಟ್ ಮಾಡಿ ಮಾರ್ಪಾಡು ಮಾಡುತ್ತಿದ್ದಾರೆ. ಇದರಿಂದ ತಮ್ಮ ಹೆಸರಿಗೆ ಕಳಂಕ ಬರುವ ಸಾಧ್ಯತೆ ಇದೆ ಜೊತೆಗೆ ಸೈಬರ್ ಕ್ರೈಂ ವಂಚನೆ ಕೂಡ ಆಗಬಹುದು. ಇದು ಜನರನ್ನು ದಾರಿ ತಪ್ಪಿಸಬಹುದು, ಹೀಗಾಗಿ ತಮ್ಮ ಗುರುತಿನ ದುರುಪಯೋಗವನ್ನು ತಡೆಯಲು ಕ್ರಮವನ್ನು ಶೀಘ್ರವೇ ಕೈಗೊಳ್ಳುವಂತೆ ಅವರ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!