ಉದಯವಾಹಿನಿ, ಟೋಕಿಯೋ: ಉತ್ತರ ಜಪಾನ್ ಕರಾವಳಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಈ ಪ್ರದೇಶದಲ್ಲಿ ಇದಕ್ಕೂ ಮುನ್ನಾ ದಿನ ಸಂಭವಿಸಿದ ಭೂಕಂಪಕ್ಕಿಂತ ಇದು ಪ್ರಬಲವಾಗಿದ್ದು, 50 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಸಂಭವಿಸಿದ ಭೂಕಂಪನ ತೀವ್ರತೆ 6.7ರಷ್ಟಿದ್ದು, ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳು ಉತ್ತರ ಫೆಸಿಫಿಕ್ ಕರಾವಳಿಗೆ ಅಪ್ಪಳಿಸಬಹುದು ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ.ಸುನಾಮಿ ಎಚ್ಚರಿಕೆ ನೀಡಲಾಗಿದೆ. ಹೊಕ್ಕೈಡೊದ ಮುಖ್ಯ ಉತ್ತರ ದ್ವೀಪ ಮತ್ತು ಅಮೋರಿ ಪ್ರದೇಶದಲ್ಲಿ 20 ಸೆಂ.ಮೀ ಅಲೆಗಳು ದಾಖಲಾಗಿವೆ ಎಂದು ಜೆಎಂಎ ಮಾಹಿತಿ ನೀಡಿದೆ.ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ(ಯುಎಸ್‌ಜಿಎಸ್)ಯೂ ಕೂಡ ಭೂಕಂಪನ 6.7ರಷ್ಟು ತೀವ್ರತೆಯಲ್ಲಿ ಸಂಭವಿಸಿದ್ದು, ಕೇಂದ್ರಬಿಂದು ಹೊನ್ಶು ಮುಖ್ಯದ್ವೀಪದ ಇವಾಟೆ ಪ್ರಾಂತ್ಯದ ಕುಜಿ ನಗರದಿಂದ 130 ಕಿಲೋ ಮೀಟರ್ ದೂರದಲ್ಲಿದೆ ಎಂದು ತಿಳಿಸಿದೆ.
ಭೂಕಂಪನದ ಬೆನ್ನಲ್ಲೇ ಜನರ ಸ್ಥಳಾಂತರಕ್ಕೆ ಆದೇಶ ನೀಡಲಾಗಿತ್ತು. ಅಒಮೊರಿಯಲ್ಲಿನ ಹೈ ಸ್ಟೀಟ್ ಟವರ್ 70ಮೀಟರ್ನಷ್ಟು ಹಾನಿಗೊಂಡಿದೆ. ಇದರಿಂದ ಟವರ್ ಕುಸಿಯುವ ಅಪಾಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಪ್ರಾದೇಶಿಕ ಪರಮಾಣು ಸೌಲಭ್ಯದಲ್ಲಿ ತಕ್ಷಣಕ್ಕೆ ಯಾವುದೇ ವ್ಯತ್ಯಯ ಕಂಡುಬಂದಿಲ್ಲ ಎಂದು ಪರಮಾಣು ನಿಯಂತ್ರಣ ಪ್ರಾಧಿಕಾರ ಹೇಳಿದೆ.ಭೂಕಂಪದ ನಂತರ ಇನ್ನೊಂದು ವಾರದವರೆಗೆ ಇದೇ ರೀತಿಯ ಅಥವಾ ಹೆಚ್ಚಿನ ಗಾತ್ರದ ಮತ್ತೊಂದು ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಜೆಎಂಎ ಎಚ್ಚರಿಕೆ ನೀಡಿದೆ. ಮುಖ್ಯ ದ್ವೀಪ ಹೊನ್ಶುವಿನ ಈಶಾನ್ಯ ತುದಿಯಲ್ಲಿರುವ ಸ್ಯಾನ್ರಿಕು ಪ್ರದೇಶ ಮತ್ತು ಪೆಸಿಫಿಕ್‌ಗೆ ಎದುರಾಗಿರುವ ಉತ್ತರ ದ್ವೀಪ ಹೊಕ್ಕೈಡೊ ಕೂಡ ಈ ಎಚ್ಚರಿಕೆಯ ವ್ಯಾಪ್ತಿಯಲ್ಲಿದೆ.
ಉತ್ತರ ಜಪಾನ್‌ನಲ್ಲಿ 7.5ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 23 ಜನರು ಗಾಯಗೊಂಡಿದ್ದಾರೆ. ಇದು ಪೆಸಿಫಿಕ್ ಕರಾವಳಿ ಭಾಗಗಳಲ್ಲಿ ಸುನಾಮಿಗೆ ಕಾರಣವಾಗಿದೆ. ಇದರಿಂದ ಸುಮಾರು 90 ಸಾವಿರ ನಿವಾಸಿಗಳನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ.
