ಉದಯವಾಹಿನಿ, ಭಾರತ ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಅಣ್ಣ ಇರುವುದು ಬಹುತೇಕ ಮಂದಿಗೆ ಇಂದಿಗೂ ತಿಳಿದಿಲ್ಲ. ಕೇವಲ ಅಣ್ಣ ಮಾತ್ರವಲ್ಲ, ಅವರು ಕೂಡ ಕ್ರಿಕೆಟರ್ ಆಗಿ ದೊಡ್ಡ ಹೆಸರು ಮಾಡಬೇಕೆಂದು ಕನಸು ಕಂಡವರು. ಆದರೆ, ಅವರು ತನ್ನ ತಮ್ಮ ಯಶಸ್ವಿ ಜೈಸ್ವಾಲ್‌ಗಾಗಿ ತನ್ನ ಕ್ರಿಕೆಟ್ ಕನಸನ್ನೇ ತ್ಯಾಗ ಮಾಡಿದ್ದರು! ಅವರ ಹೇಸರೇ ತೇಜಸ್ವಿ ಜೈಸ್ವಾಲ್ . ಯಶಸ್ವಿ ಕ್ರಿಕೆಟ್‌ನಲ್ಲಿ ಬೆಳಕಿಗೆ ಬರುವುದಕ್ಕೂ ಮುಂದೆ ಅವರ ಕುಟುಂಬ ಕಡು ಬಡತನದಲ್ಲಿತ್ತು ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಿತ್ತು. ಈ ವೇಳೆ ಅಣ್ಣ ತೇಜಸ್ವಿ ಜೈಸ್ವಾಲ್, ತನ್ನ ಕ್ರಿಕೆಟ್ ಕನಸನ್ನು ಬದಿಗಿಟ್ಟು ತಮ್ಮ ಯಶಸ್ವಿ ಕ್ರಿಕೆಟ್ ಭವಿಷ್ಯಕ್ಕಾಗಿ ದೆಹಲಿಯಲ್ಲಿ ಸೇಲ್ಸ್ ಮ್ಯಾನ್ ಕೆಲಸ ಮಾಡಿದ್ದರು. ಆದರೆ, ಈಗ ಅವರ ಅದೃಷ್ಟ ಸಂಪೂರ್ಣ ಬದಲಾಗಿದೆ. ಇದೀಗ ತಮ್ಮ ಅಣ್ಣನ ಕ್ರಿಕೆಟ್ ಕನಸನ್ನು ಈಡೇರಿಸಲು ಯಶಸ್ವಿ ಜೈಸ್ವಾಲ್ ಪಣ ತೊಟ್ಟಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರ ಅಣ್ಣ ತಜಸ್ವಿ ಜೈಸ್ವಾಲ್ ಅವರು ತ್ರಿಪುರ ತಂಡದ ಪರ ಸೈಯದ್ ಮುಷ್ತಾಕ್ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ; ತಮ್ಮ ದೇಶಿ ಟಿ20 ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಈ ಹಿಂದೆ ತಮ್ಮನಿಗಾಗಿ ಶ್ರಮಪಟ್ಟಿದ್ದ ಅಣ್ಣ ತೇಜಸ್ವಿಗಾಗಿ ಇದೀಗ ಟೀಮ್ ಇಂಡಿಯಾ ಆರಂಭಿಕ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಕ್ಷಣ ನಿಜಕ್ಕೂ ಜೈಸ್ವಾಲ್ ಸಹೋದರರಿಗೆ ಅತ್ಯಂತ ಸ್ಮರಣೀಯವಾಗಿದೆ ಎಂದರೆ ತಪ್ಪಾಗಲಾರದು. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ತೇಜಸ್ವಿ, ತಮ್ಮ ಕ್ರಿಕೆಟ್ ಪಯಣದ ಬಗ್ಗೆ ವಿವರಿಸಿದ್ದಾರೆ.
