ಉದಯವಾಹಿನಿ, ಈ ಬಾರಿ ಮಳೆ ಜೋರಿದ್ದಂತೆ ಚಳಿರಾಯನ ಆರ್ಭಟವೂ ಜೋರಾಗಿಯೇ ಇದೆ. ಈಗಾಗಲೇ ಚಳಿಯ ಪ್ರಕೋಪಕ್ಕೆ ಜನರು ಗಡ ಗಡ ನಡುಗುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಚಳಿಗಾಲದಲ್ಲಿ n) ಚರ್ಮ ಹಾಗೂ ಕೂದಲಿನ ಆರೈಕೆ ಕಡೆ ಹೆಚ್ಚಿನ ಗಮನ ಹರಿಸದೆ ಇದ್ದರೆ ಚರ್ಮವು ನೆರಿಗೆ ಬಿದ್ದು ವಯಸ್ಸಾದವರಂತೆ ಕಾಣುತ್ತದೆ ಹಾಗೂ ಕೂದಲಿನ ಸಮಸ್ಯೆಯೂ ಕಾಡತೊಡಗುತ್ತದೆ. ಬೇಸಗೆಯಲ್ಲಿ ನಾವು ಹೆಚ್ಚೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ತೇವಾಂಶವಿರುತ್ತದೆ. ಆದರೆ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆಯಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರ ನೇರ ಪರಿಣಾಮ ಚರ್ಮದ ಮೇಲಾಗುತ್ತದೆ. ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಸಿವೆ ಎಣ್ಣೆಯನ್ನು ಹೇಗೆ ಬಳಸಬಹುದು ಎಂಬ ಮಾಹಿತಿ ಈ ಲೇಖನದಲ್ಲಿದೆ.
ನಮ್ಮ ಹಿರಿಯರು ಆ ಕಾಲದಲ್ಲಿ ಸಾಸಿವೆ ಎಣ್ಣೆಯನ್ನು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಳಸುತ್ತಿದ್ದರು. ಸ್ನಾನಕ್ಕೆ ಮೊದಲು ಸಾಸಿವೆ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುವ ಪರಿಪಾಠ ಆ ಕಾಲದಲ್ಲಿತ್ತು. ಚರ್ಮದಲ್ಲಿರುವ ಕಲೆಗಳನ್ನು ನಿವಾರಿಸಲು ಸಾಸಿವೆ ಎಣ್ಣೆಯನ್ನು ಕಡಲೆ ಹಿಟ್ಟು, ಮೊಸರು ಮತ್ತು ಲಿಂಬೆರಸದೊಂದಿಗೆ ಸೇರಿಸಿಕೊಂಡು ದೇಹಕ್ಕೆ ಹಚ್ಚಿದರೆ ಅದೇ ನ್ಯಾಚುರಲ್ ಸ್ಕಿನ್ ಥೆರಪಿಯಾಗುತ್ತದೆ.
ಚಳಿಗಾಲದಲ್ಲಿ ಚರ್ಮವು ಒಣಗುವುದು ಹಾಗೂ ಗೆರೆಗಳು ಬಿದ್ದಂತೆ ಆಗುವುದು ಸಾಮಾನ್ಯವಾಗಿದೆ. ಇದಕ್ಕಾಗಿ, ಕೆಲವು ಹನಿ ಸಾಸಿವೆ ಎಣ್ಣೆ ತೆಗೆದುಕೊಂಡು ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ ಮತ್ತು ಅದನ್ನು ಕೆಲ ನಿಮಿಷಗಳವರೆಗೆ ಹಾಗೇ ಬಿಡಿ. ಬಳಿಕ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಚರ್ಮವು ಈಗ ತುಂಬಾ ಮೃಧುವಾಗುತ್ತದೆ ಮತ್ತು ಮೇಕಪ್ ಮಾಡಲು ಅನುಕೂಲವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!