ಉದಯವಾಹಿನಿ, ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದೆ. ಏಕೆಂದರೆ ಚಳಿಗಾಲದಲ್ಲಿ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಅವಧಿಯಲ್ಲಿ ಕೆಲ ಆಹಾರಗಳು ಒಳ್ಳೆಯದಾಗಿರಬಹುದು. ಮತ್ತೆ ಕೆಲವು ಆಹಾರಗಳ ಸೇವನೆಯನ್ನು ಬಿಡಬೇಕಾಗುತ್ತದೆ. ಕಳಪೆ ಆಹಾರ ಕ್ರಮಗಳು ಆರೋಗ್ಯ ಪ್ರಯೋಜನಗಳ ಬದಲಿಗೆ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು.
ಅನೇಕರು ಚಳಿಗಾಲದಲ್ಲಿ ಬೆಂಡೆಕಾಯಿ ತಿನ್ನುವುದನ್ನು ತಪ್ಪಿಸಬೇಕು ಹಾಗೂ ಇನ್ನು ಕೆಲವು ಜನರು ಚಳಿಗಾಲದಲ್ಲಿ ಬೆಂಡೆಕಾಯಿ ತಿನ್ನುವುದು ಹಾನಿಕಾರಕ ಎಂದು ಭಾವಿಸುತ್ತಾರೆ. ಆದ್ರೆ ಚಳಿಗಾಲದಲ್ಲಿ ಬೆಂಡೆಕಾಯಿ ಸೇವನೆ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳು ಲಭಿಸುತ್ತದೆ? ಬೆಂಡೆಕಾಯಿ ನೆಗಡಿಗೆ ಒಳ್ಳೆಯದೇ? ಬೆಂಡೆಕಾಯಿ ಉಷ್ಣವೇ ಅಥವಾ ಶೀತದ ಅಂಶವನ್ನು ಹೊಂದಿದೆಯೇ ಎಂಬುದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ನೋಡೋಣ.
ಚಳಿಗಾಲದಲ್ಲಿ ಬೆಂಡೆಕಾಯಿ ಸೇವಿಸಬಹುದೇ? ಪೌಷ್ಟಿಕ ತಜ್ಞೆ ಅರ್ಚನಾ ಕೋಠಾರಿ ತಿಳಿಸುವ ಪ್ರಕಾರ, ಚಳಿಗಾಲದಲ್ಲಿ ಬೆಂಡೆಕಾಯಿ ಸೇವನೆ ಮಾಡಬಹುದು. ಜೊತೆಗೆ ಬೆಂಡೆಕಾಯಿ ಸೇವಿಸುವುದು ತುಂಬಾ ಸುರಕ್ಷಿತವಾಗಿದೆ. ಆದರೆ, ಈ ಋತುವಿನಲ್ಲಿ ತಾಜಾ ಬೆಂಡೆಕಾಯಿಗಳು ಕಂಡು ಬರುವುದಿಲ್ಲ. ಬೆಂಡೆಕಾಯಿ ಬೇಸಿಗೆಯಲ್ಲಿ ದೊರೆಯುವ ತರಕಾರಿಯಾಗಿದೆ. ಬೆಂಡೆಕಾಯಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇಂತಹ ಸಂದರ್ಭಗಳಲ್ಲಿ ಸರಿಯಾದ ಶುಚಿಗೊಳಿಸುವಿಕೆ, ಸರಿಯಾದ ರೀತಿಯಲ್ಲಿ ಅಡುಗೆಯನ್ನು ತಯಾರಿಸಿ ಬೆಂಡೆಕಾಯಿಯನ್ನು ಸೇವಿಸಬಹುದು. ಚಳಿಗಾಲದಲ್ಲಿ ಬೆಂಡೆಕಾಯಿ ಸೇವಿಸುವುದರಿಂದ ಉಂಟಾಗುವ ತೊಂದರೆ: ಚಳಿಗಾಲದಲ್ಲಿ ಸಾಮಾನ್ಯವಾಗಿ ನಿಧಾನ ಜೀರ್ಣಕ್ರಿಯೆ, ನಿರ್ಜಲೀಕರಣ, ಒಣ ಚರ್ಮ, ದುರ್ಬಲಗೊಂಡ ರೋಗನಿರೋಧಕ ಶಕ್ತಿ ಮುಂತಾದ ಸಮಸ್ಯೆಗಳನ್ನು ಕಾಣಬಹುದು. ಈ ಋತುವಿನಲ್ಲಿ ಬೆಂಡೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಬೆಂಡೆಕಾಯಿಯಲ್ಲಿ ವಿವಿಧ ಅಗತ್ಯ ಪೋಷಕಾಂಶಗಳು ಇರುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ಬೆಂಡೆಕಾಯಿ ನೈಸರ್ಗಿಕ ಮಾಯಿಶ್ಚರೈಸರ್: ಬೆಂಡೆಕಾಯಿಯಲ್ಲಿ ಕಂಡುಬರುವ ನೈಸರ್ಗಿಕ ಜೆಲ್ ಅನ್ನು ಲೋಳೆ ಎಂದು ಕರೆಯಲಾಗುತ್ತದೆ, ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ಅನೇಕರು ನಿರ್ಜಲೀಕರಣ ಮತ್ತು ಒಣ ಚರ್ಮದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಬೆಂಡೆಕಾಯಿಯಲ್ಲಿರುವ ಲೋಳೆಯು ದೇಹಕ್ಕೆ ನೈಸರ್ಗಿಕ ತೇವಾಂಶವನ್ನು ಒದಗಿಸುತ್ತದೆ. ಸುಗಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ.
ಬೆಂಡೆಕಾಯಿ ಉಷ್ಣವೇ, ಶೀತವೇ? ಬೆಂಡೆಕಾಯಿ ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ, ವಿಶೇಷವಾಗಿ ಕಚ್ಚಾ ಬೆಂಡೆಕಾಯಿ ಆಗಿರುವಾಗ ಇದು ಬೇಸಿಗೆಗೆ ಪ್ರಯೋಜನಕಾರಿಯಾಗಿದೆ. ಆದರೆ, ವಿವಿಧ ಮಸಾಲೆಗಳೊಂದಿಗೆ ಬೇಯಿಸಿದಾಗ ಇದು ಉಷ್ಣವಾಗಬಹುದು.
