ಉದಯವಾಹಿನಿ, ಚಳಿಗಾಲದ ಬೆಳಗಿನ ಉಪಹಾರ ಅಥವಾ ಸಂಜೆ ಸ್ನ್ಯಾಕ್ಸ್ಗಾಗಿ ಸಾಮಾನ್ಯವಾಗಿ ಒಂದೇ ಬಗೆಯ ತಿಂಡಿಗಳನ್ನು ಸೇವಿಸಿ ಬೇಸರವಾಗಿದೆಯೇ..? ಹಾಗಾದ್ರೆ ನಾವು ನಿಮಗಾಗಿ ವಿಶೇಷ ಮಸಾಲ ಉದ್ದಿನ ವಡಾ ಒಮ್ಮೆ ಸಿದ್ಧಪಡಿಪಡಿಸಿ ನೋಡಿ. ಈ ವಡಾ ಹೊರಗೆ ಕ್ರಿಸ್ಪಿ & ಟೇಸ್ಟಿ ಟೇಸ್ಟಿ ‘ಮೇಥಿ ಪಕೋಡ’ ತಯಾರಿಸುವುದು ಹೇಗೆ ಗೊತ್ತೇ? ಮನೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಟ್ರೈ ಮಾಡಿಗರಿಗರಿಯಾಗಿರುತ್ತವೆ ಹಾಗೂ ಒಳಗೆ ಮೃದುವಾಗಿರುತ್ತವೆ. ಇವುಗಳನ್ನು ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ರುಚಿ ನೋಡಬೇಕು ಎನಿಸುತ್ತದೆ. ಮಕ್ಕಳು ಕೂಡ ಇವುಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ.
ಈ ಉದ್ದಿನ ವಡಾಗಳನ್ನು ಟಿಫಿನ್ ಆಗಿ ಮಾತ್ರವಲ್ಲದೆ ಸಂಜೆಯ ತಿಂಡಿಯಾಗಿಯೂ ತಯಾರಿಸಬಹುದು. ಇವುಗಳನ್ನು ಬಹಳ ಕಡಿಮೆ ಸಮಯದಲ್ಲಿ ಪರಿಪೂರ್ಣವಾಗಿ ತಯಾರಿಸಬಹುದು. ಜೊತೆಗೆ ಈ ವಡಾಗಳನ್ನು ತಯಾರಿಸಲು ಕಡಿಮೆ ಎಣ್ಣೆ ಸಾಕು. ಹಾಗಾದರೆ ಗರಿಗರಿಯಾದ ಹಾಗೂ ರುಚಿಕರವಾದ ಮಸಾಲ ವಡಾಗಳನ್ನು ತಯಾರಿಸಲು ಬೇಕಾದ ಪದಾರ್ಥಗಳು, ತಯಾರಿಸುವ ವಿಧಾನದ ಕುರಿತು ಇದೀಗ ತಿಳಿಯೋಣ.
ಉದ್ದಿನಬೇಳೆ – 2 ಕಪ್ , ಧನಿಯಾ – 2 ಟೀಸ್ಪೂನ್ , ಶುಂಠಿ ಹೋಳುಗಳು – 1 ಟೀಸ್ಪೂನ್
ಬೆಳ್ಳುಳ್ಳಿ ಎಸಳು – 15, ಹಸಿರು ಮೆಣಸಿನಕಾಯಿ – 4, ಕೆಂಪು ಮೆಣಸಿನಕಾಯಿ – 3
ಈರುಳ್ಳಿ – 2, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು ಬೇಕಾದಷ್ಟು
ಅತ್ಯಂತ ರುಚಿಕರವಾದ ಮಸಾಲ ಉದ್ದಿನ ವಡೆ ಸಿದ್ಧಪಡಿಸಲು ಮೊದಲಿಗೆ, ಎರಡು ಕಪ್ ಉದ್ದಿನಬೇಳೆ ತಗೆದುಕೊಂಡು ಮಿಕ್ಸಿಂಗ್ ಬೌಲ್‌ನಲ್ಲಿ ಹಾಕಿ ನಾಲ್ಕು ಗಂಟೆಗಳ ಕಾಲ ಸಾಕಷ್ಟು ನೀರಿನೊಂದಿಗೆ ನೆನೆಸಿಕೊಳ್ಳಿ. ಇವುಗಳನ್ನು ನಾಲ್ಕು ಗಂಟೆಗಳ ಬಳಿಕ ಉದ್ದಿನಬೇಳೆಯಿಂದ ನೀರನ್ನು ಬಸಿದು ಅರ್ಧ ಗಂಟೆ ಪಕ್ಕಕ್ಕೆ ಇಡಿ. ಮತ್ತೊಂದು ಕಡೆ ಎರಡು ಟೀಸ್ಪೂನ್ ಧನಿಯಾ, ಒಂದು ಟೀಸ್ಪೂನ್ ಶುಂಠಿ ಪೀಸ್ಗಳು, 15 ಬೆಳ್ಳುಳ್ಳಿ ಎಸಳುಗಳನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ. ಇದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಒಣ ಮೆಣಸಿನಕಾಯಿಗಳನ್ನು ಸೇರಿಸಿ. ನೀರನ್ನು ಹಾಕದೇ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ. ಇದೀಗ ಇವುಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
