ಉದಯವಾಹಿನಿ, ಸಾಮಾನ್ಯವಾಗಿ ಚಿಕನ್ ಕಬಾಬ್ ಮಾಡುವುದನ್ನು ನೋಡಿರುತ್ತೇವೆ. ಕ್ರಿಸ್ಪಿಯಾಗಿ ಖಾರವಾಗಿ ಸಕ್ಕತ್ ಟೇಸ್ಟಿ ಆಗಿರುತ್ತದೆ. ಆದರೆ ಇದೇ ರೀತಿ ವೆಜ್ ನಲ್ಲಿ ಮಾಡುವುದು ಕಷ್ಟವಾಗುತ್ತದೆ. ಮಾಡಿದರೂ ಕೂಡ ಆ ರೀತಿಯ ಟೇಸ್ಟ್ ಬರುವುದಿಲ್ಲ. ಇದೀಗ ವೆಜ್ ನಲ್ಲಿ ಅದೇ ರೀತಿಯ ಟೇಸ್ಟ್ ಬರುವ ಹಾಗೆ ಮಾಡಿ ಕ್ಯಾಬೇಜ್ ಕಬಾಬ್.
ಬೇಕಾಗುವ ಸಾಮಗ್ರಿಗಳು
ಕ್ಯಾಬೇಜ್, ಈರುಳ್ಳಿ, ಕೊತ್ತಂಬರಿ, ಚಾಟ್ ಮಸಾಲ, ಕಾರದಪುಡಿ
ಧನಿಯಾ ಪುಡಿ, ಉಪ್ಪು, ಎಣ್ಣೆ, ಅಕ್ಕಿ ಹಿಟ್ಟು, ಕಡಲೆ
ಮಾಡುವ ವಿಧಾನ
ಮೊದಲಿಗೆ ಒಂದು ಬೌಲ್ ಗೆ ಚಿಕ್ಕದಾಗಿ ಕತ್ತರಿಸಿದ ಕ್ಯಾಬೇಜ್, ಈರುಳ್ಳಿ, ಕೊತ್ತಂಬರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಉಪ್ಪು, ಕಾರದಪುಡಿ, ಧನಿಯಾ ಪುಡಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಹಾಕಿ ನೀರು ಹಾಕಿ ಕಲಸಿಕೊಳ್ಳಿ.
ಬಳಿಕ ಒಂದು ಬಾಣಲಿಗೆ ಎಣ್ಣೆ ಹಾಕಿ ಕಾಯಲು ಬಿಡಬೇಕು.. ನಂತರ ಕಲಸಿದ ಮಿಶ್ರಣವನ್ನು ವೃತ್ತಾಕಾರದ ಅಥವಾ ಕಬಾಬ್ ಆಕಾರದಂತೆ ಮಾಡಿಕೊಂಡು ಎಣ್ಣೆಗೆ ಬಿಟ್ಟುಕೊಳ್ಳಬೇಕು. ಚೆನ್ನಾಗಿ ಕೆಂಪು ಬಣ್ಣಕ್ಕೆ ತಿರುಗುವವರೆಗೂ ಕರೆದುಕೊಂಡರೆ ಕ್ಯಾಬೇಜ್ ಕಬಾಬ್ ಸವಿಯಲು ಸಿದ್ಧವಾಗುತ್ತದೆ.
