ಉದಯವಾಹಿನಿ, ಜೋಗಿ ಪ್ರೇಮ್ ಅವರ ಜತೆ ಕೆಲಸ ಮಾಡಿದ ಸಾಕಷ್ಟು ಜನ ಕಲಾವಿದರು, ತಂತ್ರಜ್ಞರು ಫಿಲಂ ಇಂಡಸ್ಟ್ರಿಯಲ್ಲಿ ಸ್ವತಂತ್ರವಾಗಿ ಗುರುತಿಸಿಕೊಂಡಿದ್ದಾರೆ. ಆ ಸಾಲಿಗೆ ಈಗ ಹಾಸ್ಯನಟ ಶಿವಮಂಜು ಕೂಡ ಸೇರುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ಕಲಾವಿದ, ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರೋ ಶಿವ ಮಂಜು ಅವರಲ್ಲಿ ಒಬ್ಬ ನಿರ್ದೇಶಕನೂ ಇದ್ದಾನೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ.
ಜೋಗಿ ಪ್ರೇಮ್ ಜತೆ ಸುಮಾರು 12 ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಶಿವಮಂಜು ಈಗ ಮೊದಲಬಾರಿಗೆ ನಿರ್ದೇಶಕನಾಗುತ್ತಿದ್ದಾರೆ. ಕಳೆದ ಭಾನುವಾರ ನಾಗರಭಾವಿಯ ಶ್ರೀರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಇವರ ನಿರ್ದೇಶನದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಯಿತು. ನಿರ್ಮಾಪಕ ಮಧು ಅವರ ‘ಮಾರ್ಕ್ ಮೂವೀ ಮೇಕರ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರ ದೊಟ್ಟ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಕಂಗ್ರಾಚುಲೇಶನ್ಸ್ ಬ್ರದರ್ ಖ್ಯಾತಿಯ ಹರಿಸಂತೋಷ್ ಕಾರ್ಯಕ್ರಮಕ್ಕೆ ಆಗಮಿಸಿ ಶಿವಮಂಜು ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.
ಹಲವಾರು ತಿಂಗಳ ಕಾಲ ಎಫರ್ಟ್ ಹಾಕಿ ಒಂದೊಳ್ಳೆ ಕಾನ್ಸೆಪ್ಟ್ ಹಾಗೂ ಗಟ್ಟಿ ಕಥೆಯನ್ನು ಮಾಡಿಕೊಂಡಿರುವ ಶಿವ ಮಂಜು ಅವರು, ದೊಡ್ಡ ಸ್ಟಾರ್ ಕಾಸ್ಟ್ ಇಟ್ಟುಕೊಂಡು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜತೆಗೆ ನಿರ್ಮಾಪಕ ಮಧು ಅವರಿಗೂ ಸಹ ಇದು ಮೊದಲ ಚಿತ್ರವಾಗಿದ್ದು, ಶಿವಮಂಜುಗೆ ಬೆಂಬಲವಾಗಿ ನಿಂತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಪ್ರಾರಂಭಿಸುವ ಪ್ಲಾನ್ ಇದ್ದು, ಅದೇ ದಿನ ಈ ಚಿತ್ರದ ನಾಯಕ, ನಾಯಕಿ, ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!