ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತಿಂಗಳುಗಳ ಕಾಲ ನಡೆದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಬಳಿಕ ಚುನಾವಣಾ ಆಯೋಗ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 58 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲು ಪ್ರಸ್ತಾಪಿಸಲಾಗಿದ್ದು, ಅಳಿಸಲಾದ ಹೆಸರುಗಳ ಪ್ರತ್ಯೇಕ ಪಟ್ಟಿಯನ್ನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಆಯೋಗದ ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಸುಮಾರು 58.08 ಲಕ್ಷ ಹೆಸರುಗಳನ್ನು ಅಳಿಸಲಾಗುತ್ತದೆ. ಇದರಲ್ಲಿ 24.18 ಲಕ್ಷ ಮಂದಿ ಮೃತ ಮತದಾರರ ಹೆಸರುಗಳು, 12.01 ಲಕ್ಷ ಮಂದಿ ಕಾಣೆಯಾದ ಅಥವಾ ಪತ್ತೆಯಾಗದ ಮತದಾರರು, 19.92 ಲಕ್ಷ ಮಂದಿ ವಿಳಾಸ ಬದಲಾವಣೆಯಿಂದ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದವರು, 1.37 ಲಕ್ಷ ಮಂದಿ ನಕಲಿ ಅಥವಾ ವಂಚನೆಯ ಮತದಾರರು, 57,509 ಮಂದಿ ಇತರ ವರ್ಗದಲ್ಲಿ ಇದ್ದವರಾಗಿದ್ದಾರೆ. ಮುಂಬರುವ ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ ನಿಖರವಾದ ಮತ್ತು ನವೀಕರಿಸಿದ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗದ ಪ್ರಯತ್ನಗಳ ಭಾಗವಾಗಿ ಈ ಅಳಿಸುವಿಕೆಗಳು ನಡೆದಿವೆ. ಈ ಪ್ರಕ್ರಿಯೆಗೆ ಟಿಎಂಸಿ ಸೇರಿ ಇತರೆ ವಿರೋಧ ಪಕ್ಷಗಳು ವಿರೋಧಿಸಿವೆ.

Leave a Reply

Your email address will not be published. Required fields are marked *

error: Content is protected !!