ಉದಯವಾಹಿನಿ,ದೇವದುರ್ಗ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಳಿ ಎಸ್ ಎಫ್ ಐ ಸಂಘಟನೆಯ ಮುಖಂಡರು ಹಾಗೂ ಶಾವಂತಗಲ್ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು,  ಶಾವಂತಗಲ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪಾಂಡುರಂಗ ಹಾಗೂ ಸಹ ಶಿಕ್ಷಕಿ ಕವಿತಾ ಶಾಲೆಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದಿಲ್ಲ ಅಲ್ಲದೇ ಗ್ರಾಮಸ್ಥರು ಶಾಲೆಗೆ ಸಮಯಕ್ಕೆ ಸರಿಯಾಗಿ ಬರುವಂತೆ ಮುಖ್ಯಶಿಕ್ಷಕರಿಗೆ ತಿಳಿಸಿದರೆ. ಬೇಜವಬ್ದಾರಿ ವರ್ತನೆಯಿಂದ ನಡೆದುಕೊಳ್ಳುತ್ತಿದ್ದಾರೆ.ಶಾಲೆಯಲ್ಲಿ 250-300 ಮಕ್ಕಳು ಇದ್ದಯ, ಕೇವಲ ಖಾಯಂ ಶಿಕ್ಷಕರು 3ಜನ ಇದ್ದಾರೆ ಅದರಲ್ಲಿ ಇಬ್ಬರೂ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಾರದೇ ಇರುವುದರಿಂದ ಅತಿಥಿ ಶಿಕ್ಷಕರ ಮೇಲೆಯೇ ಶಾಲೆ ಶುರುವಾಗುತ್ತದೆ. ಇದರಿಂದ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕೆಳಮಟ್ಟಕ್ಕೆ ಇಳಿಯುವ ಆತಂಕ ಪಾಲಕರಲ್ಲಿ ಹೆಚ್ಚಾಗಿದ್ದು,ತಕ್ಷಣ ಈ ಇಬ್ಬರ ಮೇಲೆ ಸೂಕ್ತ ಕ್ರಮ ಜರುಗಿಸಿ ಸಮಯ ಪಾಲನೆ ಮಾಡುವ ಶಿಕ್ಷಕರ ನಿಯೋಜನೆಗ ಮಾಡಬೇಕು. ಕೂಡಲೇ ಈ ಇಬ್ಬರ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಬೇಕು. ಶಾಲೆಯಲ್ಲಿ ಎಸ್ಡಿಎಂಸಿ ರಚನೆ ಮಾಡಬೇಕು ಎಂದು ಈ ಮೂಲಕ ಪಾಲಕರೊಂದಿಗೆ ಎಸ್ಎಫ್ಐ ಆಗ್ರಹಿಸುತ್ತದೆ ಒಂದು ವೇಳೆ ಮನವಿ ನಿರ್ಲಕ್ಷ್ಯ ವಹಿಸಿ ಶಿಕ್ಷಕರನ್ನು ಮುಂದುವರಿದ್ದೆ ಆದಲ್ಲಿ ಶಾಲೆಗೆ ಬೀಗ ಮುದ್ರೆ ಹಾಕಿ ಪಾಲಕರೊಂದಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೆವೆ ಎಂದು ಹೇಳಿದರು,
ಇದೆ ಸಂದರ್ಭದಲ್ಲಿ ಎಸ್ ಎಫ್ ಐ ತಾಲೂಕು ಮುಖಂಡರಾದ ಭಾಷಾ ಸಾಬ್ ಶ್ಯಾನರದೊಡ್ಡಿ, ಪಕರಣ್ಣ, ಶಿವರಾಜ, ಗ್ರಾಮಸ್ಥರಾದ ತಾಯಪ್ಪ ನಾಯಕ, ಹನುಮಂತ್ರಾಯ ನಾಯಕ, ಬೀರಪ್ಪ ಪೂಜಾರಿ , ಮಾರುತಿ,ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!