ಉದಯವಾಹಿನಿ, ದೇವದುರ್ಗ :   ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಸ್ ಶಿವಕುಮಾರ್ ಯಾದವ್ ಸೂಚನೆಯಂತೆ ತಾಲ್ಲೂಕಿನಲ್ಲಿ ನಮ್ಮ ಜಯ ಕರ್ನಾಟಕ ಸಂಘಟನೆಯ ಬಲವರ್ಧನೆಗಾಗಿ ಮತ್ತು ಕ್ಷೇತ್ರದ ಸಾರ್ವಜನಿಕವಾಗಿ ಜನತೆಯ ಕಷ್ಟ ಕಾರ್ಪುಣ್ಯಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜನರ ಅನುಕೂಲಕ್ಕೆ ದೊರಕುವಂತೆ ಮತ್ತು ಜನತೆ ಸೌಲಭ್ಯಗಳನ್ನು ಪಡೆಯಲು ಜಾಗೃತಿ ಮೂಡಿಸುವ ಅಧಿಕಾರಿಗಳು ಜನಪ್ರತಿನಿಧಿಗಳು ಅಡ್ಡದಾರಿ ಹಿಡಿದಾಗ ನಮ್ಮ ಸಂಘಟನೆಯ ಹೋರಾಟ ಮೂಲಕ ಅವರನ್ನು ಎಚ್ಚರಿಸಲು ಮತ್ತು ತಾಲೂಕಿನಲ್ಲಿ ಸಂಘಟನೆ ಬಲಗೊಳಿಸಲು ತಾಲೂಕು ಯುವ ಘಟಕ ಹಾಗೂ ತಾಲೂಕಿನಾದ್ಯಾಂತ ನೂತನ ಗ್ರಾಮ ಘಟಕಗಳನ್ನು ರಚನೆ ಮಾಡಿ ಆದೇಶ ಪತ್ರ ನೀಡಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಯಲ್ಲನಗೌಡ ಕೆ ಇರಬಗೇರಾ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ,
ಸೋಮವಾರದಂದು ನಡೆದ ಕಾರ್ಯಕ್ರಮದಲ್ಲಿ   ಜಿಲ್ಲಾ ಉಪಾಧ್ಯಕ್ಷ ಕೃಷ್ಣಕುಮಾರ್ ಮಡಿವಾಳ. ತಾಲೂಕ ಉಪಾಧ್ಯಕ್ಷ ಮಾಧವ್ ರಾವ್ ಉಬಾಳೆ. ಮಹಿಳಾ ಘಟಕದ ಅಧ್ಯಕ್ಷೆ ಗಂಗಮ್ಮ ಬಿ ಮೋಜಿ ರಾವ್ ವಕೀಲರು. ಆರೋಗ್ಯ ಘಟಕದ ಅಧ್ಯಕ್ಷ ಡಾಕ್ಟರ್ ವಿನೋದ್ ಕುಮಾರ್ ಗಲಗ್.ಸಾಮಾಜಿಕ ಜಾಲತಾಣದ ಅಧ್ಯಕ್ಷ  ಸುನಿಲ್ ಕುಮಾರ್ ಕೆ. ನಗರ ಘಟಕದ ಅಧ್ಯಕ್ಷ ಅಮರೇಶ ಚವ್ಹಾಣ. ನಗರ ಘಟಕದ ಪ್ರಧಾನ ಕಾರ್ಯದರ್ಶಿ ಹೇಮರೆಡ್ಡಿ ಇವರುಗಳೆಲ್ಲರ ಒಮ್ಮತದ ಮೇರೆಗೆ ತಾಲೂಕ ಘಟಕದ ಕಾರ್ಯದರ್ಶಿಯನ್ನಾಗಿ ಅಮರಯ್ಯ ಸ್ವಾಮಿ ಅರಷಣಗಿ.ತಾಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ರಂಗಯ್ಯ  ಸುಂಕೇಶ್ವರಹಾಳ. ನಗರ ಘಟಕದ ಕಾರ್ಯ ಅಧ್ಯಕ್ಷರನ್ನಾಗಿ ಸುನಿಲ್ ಕುಮಾರ್. ನಗರ ಘಟಕದ ಕಾರ್ಯದರ್ಶಿಯನ್ನಾಗಿ ರಂಗನಾಥ.ತಾಲೂಕು ಯುವ ಘಟಕದ ಕಾರ್ಯದರ್ಶಿಯನ್ನಾಗಿ ರಂಗಯ್ಯ  ಹನುಮಗೌಡ ಚಿಕ್ಕಗುಡ್ಡ. ತಾಲೂಕ ಕಾರ್ಯಕಾರಿ ಸದಸ್ಯರಗಳನ್ನಾಗಿ ಶಿವರಾಜ ಎಚ್ ದೇವದುರ್ಗ, ಭೈರಪ್ಪ ಎಮ್ ಮಡಿವಾಳ, ಸಂಗಮೇಶ್ ಎಸ್ ಕಲ್ಲೂರು , ಹೇಮನೂರು ಗ್ರಾಮ ಘಟಕದ  ಅಧ್ಯಕ್ಷರನ್ನಾಗಿ ಬಸವರಾಜ್ ಮುಸ್ಟೂರು ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ತಂದೆ ಹನುಮಂತರವರನ್ನು, ಗಲಗ ಗ್ರಾಮ ಘಟಕದ ಖಜಾಂಚಿಯನ್ನಾಗಿ ಭೀಮಶಂಕರ, ಮಹಿಳಾ ಘಟಕ ತಾಲೂಕ ಕಾರ್ಯಧ್ಯಕ್ಷರನ್ನಾಗಿ ಸಾವಿತ್ರಿ ಲೋಕಪ್ಪ
ಉಪಾಧ್ಯಕ್ಷರನ್ನಾಗಿ ಅಶ್ವಿನಿ ಗಂಡ ಆನಂದಕುಮಾರ ಇವರುಗಳುನ್ನು ನೇಮಿಸಿ ಆದೇಶ ಪತ್ರ ವಿತರಿಸಲಾಯಿತು ಎಂದು ಅಧ್ಯಕ್ಷರು ಹೇಳಿದ್ದಾರೆ,
 ಈ ಸಂದರ್ಭದಲ್ಲಿ ಯುವ ಘಟಕದ ಉಪಾಧ್ಯಕ್ಷರಾದ ಅಲ್ತಾಫ್ ರವರು ನಗರ ಘಟಕ ಮತ್ತು ಯುವ ಘಟಕದ ಗಲಗ ಗ್ರಾಮ ಘಟಕದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!