ಉದಯವಾಹಿನಿ, ಯಾರೆಲ್ಲಾ ಸೌದಿ ಅರೇಬಿಯಾದಲ್ಲಿ ಆಸ್ತಿ ತೆಗೆದುಕೊಳ್ಳುವ ಆಸೆ ಹೊಂದಿದ್ದೀರೋ, ಅವರಿಗೆಲ್ಲಾ ಜನವರಿ 2026ರಿಂದ ಹೊಸ ಕಾನೂನು ಚೌಕಟ್ಟಿನ ಅಡಿಯಲ್ಲಿ ಸೌದಿ ಅರೇಬಿಯಾ ರಿಯಲ್ ಎಸ್ಟೇಟ್‌ಗೆ ಅವಕಾಶ ನೀಡಲಿದೆ. ಆದರೆ ಕೆಲವು ಷರತ್ತುಗಳಡಿ, ಕೆಲವೇ ಪ್ರಕಾರದ ಆಸ್ತಿಗಳಿಗೆ ಈ ನಿಯಮ ಅನ್ವಯವಾಗಲಿದೆ. ಹಾಗಿದ್ರೆ ಸೌದಿಯಲ್ಲಿ ಆಸ್ತಿ ಖರೀದಿಸಲು ಇರುವ ಷರತ್ತುಗಳೇನು? ಎಲ್ಲೆಲ್ಲಿ ಆಸ್ತಿ ಖರೀದಿಸಬಹುದು? ನೋಂದಣಿ ಹೇಗೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಹೌದು, ಸೌದಿ ಅರೇಬಿಯಾದಲ್ಲಿ ಆಸ್ತಿ ಖರೀದಿಸುವ ಕನಸು ಹೊಂದಿರುವ ವಿದೇಶಿಗರಿಗೆ ಸೌದಿ ಗುಡ್‌ನ್ಯೂಸ್‌ ನೀಡಿದೆ. ಸರ್ಕಾರ ಜನವರಿ 2026ರಿಂದ ಜಾರಿಗೆ ಬರಲಿರುವ ಹೊಸ ಕಾನೂನು ಚೌಕಟ್ಟಿನ ಮೂಲಕ ವಿದೇಶಿ ಹೂಡಿಕೆದಾರರಿಗೆ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಹಂತ ಹಂತವಾಗಿ ತೆರೆಯಲು ಮುಂದಾಗಿದೆ. ಆದರೆ ವಸತಿ, ವಾಣಿಜ್ಯ ಮತ್ತು ಕೃಷಿ ಆಸ್ತಿಗಳಿಗೆ ವಿಭಿನ್ನ ನಿಯಮಗಳು ಹಾಗೂ ಕೆಲವು ನಗರಗಳಿಗೆ ಸ್ಪಷ್ಟ ನಿರ್ಬಂಧಗಳಿರುವುದರಿಂದ, ಈ ಹೊಸ ವ್ಯವಸ್ಥೆಯನ್ನು ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಯಾವ ರೀತಿಯ ಆಸ್ತಿ ಕೊಳ್ಳಬಹುದು? ಏನೆಲ್ಲಾ ಕಾನೂನುಗಳು ಅನ್ವಯವಾಗುತ್ತವೆ? ವಿದೇಶಿಯರು ರಿಯಲ್ ಎಸ್ಟೇಟ್ ಅನ್ನು ಎಲ್ಲಿ ಖರೀದಿಸಬಹುದು? ಅವರು ಸ್ವಾಧೀನಪಡಿಸಿಕೊಳ್ಳಬಹುದಾದ ಆಸ್ತಿಯ ಪ್ರಕಾರಗಳು ಮತ್ತು ಮಾಲೀಕತ್ವವನ್ನು ನಿಯಂತ್ರಿಸುವ ಕಾನೂನು ಮಿತಿಗಳನ್ನು ಹೊಸ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!