ಉದಯವಾಹಿನಿ, ವಾಷಿಂಗ್ಟನ್‌: ವೆನೆಜುವೆಲಾದಲ್ಲಿರುವ ಮಧ್ಯಂತರ ಸರ್ಕಾರ ಉತ್ತಮ ಗುಣಮಟ್ಟದ 30 ಮಿಲಿಯನ್‌ನಿಂದ 50 ಮಿಲಿಯನ್ ಬ್ಯಾರೆಲ್‌ ಕಚ್ಚಾ ತೈಲವನ್ನು ಮಾರುಕಟ್ಟೆ ಬೆಲೆಯಲ್ಲಿ ನಮಗೆ ಮಾರಾಟ ಮಾಡಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
ಈ ಯೋಜನೆಯನ್ನು ತಕ್ಷಣವೇ ಕಾರ್ಯಗತಗೊಳಿಸಲು ನಾನು ಇಂಧನ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ವೆನೆಜುವೆಲಾದಿಂದ ಸಂಗ್ರಹಣಾ ಹಡಗುಗಳ ಮೂಲಕ ನೇರವಾಗಿ ಅಮೆರಿಕದ ಮಾರುಕಟ್ಟೆಗೆ ತರಲಾಗುತ್ತದೆ ಎಂದಿದ್ದಾರೆ. ಈ ಹಣವನ್ನು ನಾನು ನಿಯಂತ್ರಿಸುತ್ತೇನೆ. ವೆನೆಜುವೆಲಾ ಮತ್ತು ಅಮೆರಿಕದ ಜನರಿಗೆ ಪ್ರಯೋಜನಕ್ಕೆ ಈ ಹಣವನ್ನು ಬಳಸಲಾಗುತ್ತದೆ ಎಂದು ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ವಿಶ್ವದಲ್ಲಿ ಅತಿ ಹೆಚ್ಚು ಕಚ್ಚಾ ತೈಲ ನಿಕ್ಷೇಪ ವೆನೆಜುವೆಲಾದಲ್ಲಿದೆ. ಮೂಲ ಸೌಕರ್ಯ ಇಲ್ಲದೇ ಇರುವುದು, ಕಡಿಮೆ ಬೆಲೆ, ರಾಜಕೀಯ ಅನಿಶ್ಚಿತತೆ, ಅಮೆರಿಕದ ನಿರ್ಬಂಧದಿಂದಾಗಿ ವೆನೆಜುವೆಲಾ ತೈಲ ವಿಶ್ವದ ಮಾರುಕಟ್ಟೆಗೆ ಸುಲಭವಾಗಿ ಬರುತ್ತಿರಲಿಲ್ಲ.ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಮಂಗಳವಾರ ಯಾವುದೇ ವಿದೇಶಿ ಶಕ್ತಿ ತನ್ನ ದೇಶವನ್ನು ಆಳುತ್ತಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!