ಉದಯವಾಹಿನಿ, ನವದೆಹಲಿ: ಭಾರತದ ಅಂಡರ್-19 ತಂಡ ಮತ್ತು ದಕ್ಷಿಣ ಆಫ್ರಿಕಾದ ಅಂಡರ್-19 ತಂಡದ ನಡುವೆ ಬೆನೋನಿಯಲ್ಲಿ ಮೂರನೇ ಯುವ ಏಕದಿನ ಪಂದ್ಯದಲ್ಲಿ 14ರ ವಯಸ್ಸಿನ ವೈಭವ್ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಭಾರತದ ನಾಯಕ ಈ ಪಂದ್ಯದಲ್ಲಿ ಮೊದಲು ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು, ನಂತರ ತಮ್ಮ ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿ 63 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ವೈಭವ್ ಸೂರ್ಯವಂಶಿ ತಮ್ಮ ಇನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ಇದು ಭಾರತಕ್ಕೆ ಶುಭ ಸಂಕೇತ ಎಂದೇ ಹೇಳಬಹುದು. 14ರ ವಯಸ್ಸಿನ ಸೂರ್ಯವಂಶಿ ನಿರಂತರವಾಗಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಅವರ ಬ್ಯಟಿಂಗ್ ಪ್ರದರ್ಶನವನ್ನು ನೋಡಿದರೆ ಅವರು ನಾಯಕತ್ವವನ್ನು ಸಹ ಆನಂದಿಸುತ್ತಿದ್ದಾರೆ ಎಂದು ಹೇಳಬಹುದು. ಶತಕ ಸಿಡಿಸುವ ಜೊತೆಗೆ ಅವರು ತಮ್ಮ ಆರಂಭಿಕ ಜೊತೆಗಾರ ಆರೋನ್ ಜಾರ್ಜ್ ಅವರ ಜೊತೆಗೆ 200ಕ್ಕೂ ಅಧಿಕ ರನ್‌ಗಳ ಜೊತೆಯಾಟವನ್ನು ಆಡಿದರು. ಈ ಇನಿಂಗ್ಸ್‌ನಲ್ಲಿ ಅವರು ಆಡಿದ 74 ಎಸೆತಗಳಲ್ಲಿ 127 ರನ್‌ಗಳನ್ನು ಬಾರಿಸಿದರು.
