ಉದಯವಾಹಿನಿ, ಭಾರತದ ಶಕ್ಸ್‌ಗಮ್ ಕಣಿವೆಯ ಮೇಲೆ ಪ್ರಾದೇಶಿಕ ಹಕ್ಕನ್ನು ಪ್ರತಿಪಾದಿಸಲು ಚೀನಾ ಮತ್ತೊಮ್ಮೆ ಪ್ರಯತ್ನಿಸಿದೆ. ಪಾಕಿಸ್ತಾನದೊಂದಿಗೆ ಸಹಿ ಮಾಡಲಾದ ಭಾರತದ ದಶಕಗಳಷ್ಟು ಹಳೆಯದಾದ ಗಡಿ ಒಪ್ಪಂದವನ್ನು ಚೀನಾ ಪ್ರಚೋದಿಸುತ್ತಿದೆ. ಈ ಒಪ್ಪಂದವನ್ನು ಭಾರತ ನಿರಂತರವಾಗಿ ಅಮಾನ್ಯವೆಂದು ತಿರಸ್ಕರಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಮತ್ತು ಭಾರತ, ಚೀನಾ, ಪಾಕಿಸ್ತಾನದ ನಡುವಿನ ದೀರ್ಘಕಾಲದ ವಿವಾದದ ಅಂಶವಾಗಿ ಉಳಿದಿರುವ ಶಕ್ಸ್‌ಗಮ್ ಕಣಿವೆ ಪ್ರದೇಶದಲ್ಲಿ ಚೀನಾದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಭಾರತದ ಆಕ್ಷೇಪಣೆಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.

ಪಾಕಿಸ್ತಾನವು 1963ರಲ್ಲಿ ಶಕ್ಸ್‌ಗಮ್ ಕಣಿವೆಯಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಿಂದ 5,180 ಚದರ ಕಿ.ಮೀ ಭಾರತೀಯ ಭೂಪ್ರದೇಶವನ್ನು ಚೀನಾಕ್ಕೆ ಕಾನೂನುಬಾಹಿರವಾಗಿ ಬಿಟ್ಟುಕೊಟ್ಟಿತ್ತು. ಭಾರತ ಈ ಕ್ರಮವನ್ನು ಕಾನೂನುಬಾಹಿರ ಎಂದು ದೃಢವಾಗಿ ತಿರಸ್ಕರಿಸಿದೆ. ಈ ಪ್ರದೇಶದ ಮೇಲೆ ಭಾರತದ ಹಕ್ಕನ್ನು ಪ್ರತಿಪಾದಿಸಿದೆ. ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶವನ್ನು ಬಿಟ್ಟುಕೊಡುವ 1963ರ ಈ ಒಪ್ಪಂದವು ಪಾಕಿಸ್ತಾನ ಮತ್ತು ಚೀನಾಕ್ಕೆ ನಿರ್ಣಾಯಕವಾಗಿತ್ತು. ಏಕೆಂದರೆ ಅದು ಅವರಿಗೆ ಕಾಮನ್ ಗಡಿಯನ್ನು ಒದಗಿಸಿತು. ಒಂದುವೇಳೆ ಇದು ಆಗದೆ ಇರುತ್ತಿದ್ದರೆ ಅದಕ್ಕೆ ಯಾವುದೇ ಗಡಿಗಳು ಇರುತ್ತಿರಲಿಲ್ಲ.

ಶಕ್ಸ್‌ಗಮ್ ಕಣಿವೆಯ ಬಗ್ಗೆ ಭಾರತದ ನಿಲುವಿನ ಕುರಿತು ಕೇಳಿದಾಗ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಬೀಜಿಂಗ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆ ಪ್ರದೇಶವು ಚೀನಾದ ಭಾಗವಾಗಿದೆ ಎಂದು ಹೇಳಿದ್ದರು. ಇದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪಾಕಿಸ್ತಾನದ ಜೊತೆಗಿನ ತನ್ನ ಒಪ್ಪಂದವನ್ನು ಉಲ್ಲೇಖಿಸಿದ ಮಾವೋ ಚೀನಾ ಮತ್ತು ಪಾಕಿಸ್ತಾನಗಳು ಗಡಿ ಒಪ್ಪಂದಕ್ಕೆ ಸಹಿ ಹಾಕಿವೆ, 1960ರ ದಶಕದಿಂದಲೂ ಎರಡೂ ದೇಶಗಳ ನಡುವಿನ ಗಡಿಯನ್ನು ನಿರ್ಧರಿಸಿವೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!