ಉದಯವಾಹಿನಿ, ಸುಮಾರು 150 ವರ್ಷಗಳ ನಂತರ ಸ್ಪೇನ್ ಮತ್ತೆ ರಾಣಿ ಆಡಳಿತಕ್ಕೆ ಸಜ್ಜಾಗಿದೆ. ಸ್ಪೇನ್‌ನ ರಾಜ 6ನೇ ಫೆಲಿಪೆ ಹಾಗೂ ರಾಣಿ ಲೆಟಿಜಿಯಾ ಹಿರಿಯ ಮಗಳು ರಾಜಕುಮಾರಿ ಲಿಯೊನರ್ ಸ್ಪೇನ್ ಉತ್ತರಾಧಿಕಾರಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ.
2005ರಲ್ಲಿ ಜನಿಸಿರುವ ಲಿಯೊನರ್, ಸ್ಪ್ಯಾನಿಷ್, ಕೆಟಲಾನ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಅಲ್ಲದೆ ಅರೇಬಿಕ್ ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿ ಆಡಳಿತ ಜ್ಞಾನವನ್ನು ಹೊಂದಿದ್ದಾರೆ. ಸ್ಪೇನ್‌ನಲ್ಲಿ ಪ್ರಜಾಪ್ರಭುತ್ವವಿದ್ದರೂ, ರಾಜ ಸಾಂಕೇತಿಕ ಮುಖ್ಯಸ್ಥನಾಗಿರುತ್ತಾರೆ. ಜತೆಗೆ ಸೇನೆಯ ನೇತೃತ್ವವನ್ನುವಹಿಸಿರುತ್ತಾರೆ. ಲಿಯೊನರ್ ಉತ್ತರಾಧಿಕಾರಿಯಾದರೆ ಸೇನೆಯನ್ನೂ ಮುನ್ನೆಡೆಸಲು ಸಾಧ್ಯವಿರಬೇಕು ಎನ್ನುವ ಕಾರಣಕ್ಕೆ ಸದ್ಯ ಲಿಯೊನರ್ ಸ್ಪೇನ್ ಸೇನೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈಗ ಲಿಯೊನರ್‌ರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿದ್ದರೂ ಈಗಿರುವ ರಾಜ 6ನೇ ಫೆಲಿಪೆ ಪದತ್ಯಾಗ ಮಾಡಿದಾಗ ಅಥವಾ ಮರಣದ ನಂತರ ಲಿಯೊನರ್ ರಾಣಿಯಾಗುತ್ತಾರೆ. ಅಲ್ಲಿಯವರೆಗೆ ಅವರು ಸ್ಪೇನ್‌ನ ಭವಿಷ್ಯದ ಮುಖ್ಯಸ್ಥೆ ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಕಮಾಂಡರ್ ಆಗಿ ತಮ್ಮ ಔಪಚಾರಿಕ ಅಧಿಕಾರವನ್ನು ಮುಂದುವರಿಸುತ್ತಾರೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!