ಉದಯವಾಹಿನಿ, ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಅದ್ದೂರಿಯಿಂದ ಆಚರಿಸಲು ಸಜ್ಜಾಗಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ, ನೆಲಗಡಲೆ, ಹುರಿಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ತಮ್ಮ ಆತ್ಮೀಯರೊಂದಿಗೆ ಹಂಚಿ ಸಂತೋಷವನ್ನು ಪಡುತ್ತಾರೆ.
ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯು ‘ಸುವರ್ಣ ಸಂಕ್ರಾಂತಿ ಸಂಭ್ರಮ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣ ಪರಿವಾರದ ಎಲ್ಲಾ ತಾರೆಗಳು ಭಾಗಿಯಾಗಲಿದ್ದಾರೆ. ಈ ಬಾರಿಯ ಸುಗ್ಗಿಯನ್ನು ಸಂಭ್ರಮಿಸಲು ಸುವರ್ಣ ತಾರೆಯರು ಆಗಮಿಸಿರೋದು ‘ಆಸೆ’ ಧಾರಾವಾಹಿಯ ಮನೆಗೆ. ಹಳ್ಳಿಯ ಸೊಗಡಿನೊಂದಿಗೆ ಸಂಕ್ರಾಂತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದ್ದು, ನೀ ಇರಲು ಜೊತೆಯಲ್ಲಿ, ಶಾರದೆ, ಜೈ ಲಲಿತಾ, ಸ್ನೇಹದ ಕಡಲಲ್ಲಿ ಸೀರಿಯಲ್ ಕಲಾವಿದರ ಮಧ್ಯೆ ಪೈಪೋಟಿಯ ಜಟಾಪಟಿಯೇ ನಡೆಯಲಿದೆ. ಹಾಡು-ಹರಟೆ, ಮೋಜು ಮಸ್ತಿಯೊಂದಿಗೆ ಸಿಕ್ಕಾಪಟ್ಟೆ ಮನೋರಂಜನೆ ನೀಡಿದ್ದಾರೆ. ಪ್ಯಾಕು ಪ್ಯಾಕು ಖ್ಯಾತಿಯ ಹಿತೇಶ್ ಕಾಪಿನಡ್ಕ ತನ್ನ ವಿನೂತನ ಗೆಟಪ್ ನಿಂದ ವಿಭಿನ್ನವಾಗಿ ಹಾಸ್ಯಮಯವಾಗಿ ರಂಜಿಸಿದ್ದಾರೆ.
ನಟ ಶಿವರಾಜ್ ಕೆ.ಆರ್.ಪೇಟೆ ರವರ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಮೂಡಿ ಬಂದಿದ್ದು, ಕಲಾವಿದರೆಲ್ಲಾ ಒಂದೇ ಪರಿವಾರದಂತೆ ಹಬ್ಬದೂಟವನ್ನು ಸವಿದದ್ದು ಸುವರ್ಣ ಕ್ಷಣಕ್ಕೆ ಸಾಕ್ಷಿಯಾಗಿದೆ. ಇದೆಲ್ಲದರ ಜೊತೆಗೆ ಸುವರ್ಣ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಒಂದನ್ನು ನೀಡಲಿದೆ ನಿಮ್ಮ ಸ್ಟಾರ್ ಸುವರ್ಣ.
ಸುವರ್ಣ ಸಂಕ್ರಾಂತಿ ಸಂಭ್ರಮವನ್ನು ಆಚರಿಸಲು ಒಟ್ಟಾಗಿ ಬರ್ತಿದ್ದಾರೆ ಸುವರ್ಣ ತಾರೆಯರು. ಇದೇ ಶುಕ್ರವಾರ (ಜ.16) ಸಂಜೆ 6.30 ರಿಂದ 9.30 ರವರೆಗೆ. ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
