ಉದಯವಾಹಿನಿ, ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹೊಸ್ತಿಲಲ್ಲಿದೆ. ಈ ನಡುವೆ ಮನೆಯಿಂದ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗ್ತಾರೆ. ಇಂದು ಬಿಗ್ ಬಾಸ್ ಮನೆಯಲ್ಲಿ ಯಾರ ಪ್ರಯಾಣ ಕೊನೆಯಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.ಧನುಷ್ ಈಗಾಗಲೇ ಫಿನಾಲೆ ತಲುಪಿದ್ದಾರೆ. ಅವರನ್ನು ಬಿಟ್ಟು ಉಳಿದವರು ಇಂದು (ಬುಧವಾರ) ಮಿಡ್ ವೀಕ್ ಎಲಿಮಿನೇಷನ್ ಸವಾಲು ಎದುರಿಸಬೇಕಿದೆ. ಇದರಲ್ಲಿ ಸೇಫ್ ಆಗುವವರು ಸೀಸನ್ 12ರ ಫಿನಾಲೆ ತಲುಪುತ್ತಾರೆ. ಈ ಸಂಬಂಧ ಕಲರ್ಸ್ ಕನ್ನಡ ಪ್ರೋಮೊ ರಿಲೀಸ್ ಮಾಡಿದೆ.
ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಆ್ಯಕ್ಟಿವಿಡಿ ರೂಮ್‌ನಿಂದ ಒಬ್ಬೊಬ್ಬರನ್ನೇ ಹೊರಗೆ ಕಳುಹಿಸಲಾಗುತ್ತದೆ. ಹೊರಕಳುಹಿಸಲ್ಪಡುವ ಸದಸ್ಯರ ಪೈಕಿ ಮನೆಯ ಒಳಗಡೆ ಮರಳಿ ಬರುವವರು ಸೀಸನ್ 12ರ ಫಿನಾಲೆ ತಲುಪುತ್ತಾರೆ. ಮನೆಗೆ ಮರಳಿ ಬಾರದ ಒಬ್ಬ ಸದಸ್ಯ/ಸದಸ್ಯೆ ವಿದಾಯ ಹೇಳಿ ಹೊರ ನಡೆಯುತ್ತಾರೆ.
ಮಿಡ್ ವೀಕ್ ಎಲಿಮಿನೇಷನ್ ಸಾಲಿನಲ್ಲಿ ಗಿಲ್ಲಿ, ರಘು, ರಕ್ಷಿತಾ, ಅಶ್ವಿನಿ, ಕಾವ್ಯ, ಧ್ರುವಂತ್ ಇದ್ದಾರೆ. ಯಾರು ಮನೆಯಲ್ಲೇ ಉಳಿಯುತ್ತಾರೆ? ಯಾರು ಹೊರಹೋಗ್ತಾರೆ ಅನ್ನೋದು ಸದ್ಯದ ಕುತೂಹಲ.
