ಉದಯವಾಹಿನಿ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್‍ನಲ್ಲಿ ಸಿನಿಮಾ ಬರೋದು ಕನ್ಫರ್ಮ್ ಆಗಿದೆ. ಅಲ್ಲು ಅರ್ಜುನ್ ಸದ್ಯ ಅಟ್ಲಿ ಜೊತೆಗೆ ಇನ್ನೂ ಹೆಸರಿಡದ ಎಎ22 ಸಿನಿಮಾ ಮಾಡುತ್ತಿದ್ದಾರೆ. ಸೂಪರ್‌ಮ್ಯಾನ್ ಕಾನ್ಸೆಪ್ಟ್ ಈ ಸಿನಿಮಾ ಬಳಿಕ ಲೋಕೇಶ್ ಜೊತೆ ಅಲ್ಲು ಅರ್ಜುನ್ ಕೈ ಜೋಡಿಸಲಿದ್ದಾರಂತೆ.
ಅಂದಹಾಗೆ ಈ ಸಿನಿಮಾಗೆ ಎಎ23 ಅನ್ನೋ ವರ್ಕಿಂಗ್ ಟೈಟಲ್‍ನಲ್ಲಿ ಸಿನಿಮಾ ಆರಂಭ ಮಾಡಲು ಭರ್ಜರಿ ಪ್ಲ್ಯಾನ್ ಮಾಡಲಾಗಿದೆಯಂತೆ. ಇನ್ನು ಈ ಸಿನಿಮಾ ಅದ್ಧೂರಿ ಮೇಕಿಂಗ್‍ನಲ್ಲಿ ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿದ್ದು, ಅಲ್ಲು ಅರ್ಜುನ್‍ಗೆ 75ಕೋಟಿ ಸಂಭಾವನೆಯನ್ನ ಲೋಕೇಶ್ ಕನಗರಾಜ್ ಆಫರ್ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಅಲ್ಲು ಅರ್ಜುನ್ ಪುಷ್ಪಾ-2 ಸಿನಿಮಾದ ಬಿಗ್ ಹಿಟ್‍ನ ನಂತರ ನಿರ್ದೇಶಕ ಅಟ್ಲಿ ಜೊತೆಗೆ ಸಿನಿಮಾ ಮಾಡ್ತಿದ್ದಾರೆ. ಇದಾದ ಬಳಿಕ ಪುಷ್ಪ ಡೈರೆಕ್ಟರ್ ಸುಕುಮಾರ್ ಜೊತೆ ಪುಷ್ಪಾ-3 ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದ್ರೆ ಕನಗರಾಜ್ ಜೊತೆ ಚಿತ್ರ ಮಾಡಲಿದ್ದಾರೆ ಎನ್ನಲಾಗ್ತಿದೆ. ಸೂಪರ್‍ಸ್ಟಾರ್ ಜೊತೆಗಿನ ಕೂಲಿ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಚಿತ್ರ ಮಾಡುವ ತಯಾರಿಯಲ್ಲಿ ಕನಗರಾಜ್ ಇದ್ದಾರೆ

Leave a Reply

Your email address will not be published. Required fields are marked *

error: Content is protected !!