ಉದಯವಾಹಿನಿ , ಬಳ್ಳಾರಿ: ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಬ್ಯಾನರ್ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಸಿಐಡಿ ತನಿಖೆ ಚುರುಕುಗೊಂಡಿದೆ.
ಈಗಾಗಲೇ ಗಲಭೆಯ ಕುರಿತು ಮಹತ್ವದ ದಾಖಲೆ ಕಲೆ ಹಾಕಿರುವ ಸಿಐಡಿ ತಂಡ ಘಟನೆ ಸಂಬಂಧ ಸಾರ್ವಜನಿಕರಿಂದಲೂ ವಿಡಿಯೋ, ಪೋಟೋ ಸಂಗ್ರಹಕ್ಕೆ ಮುಂದಾಗಿದೆ. ವಾಟ್ಸಪ್ ನಂಬರ್ ನೀಡಿ ವಿಡಿಯೋ ತುಣುಕುಗಳ ಹಾಕುವಂತೆ ಮನವಿ ಮಾಡಿಕೊಂಡಿದೆ. ಗಲಭೆ ಸಂದರ್ಭದಲ್ಲಿ ಮೊಬೈಲ್ ರೆಕಾರ್ಡ್ ಮಾಡಿದ ವಿಡಿಯೋಗಳನ್ನ ಕೇಳಿದ ಸಿಐಡಿ ವಿಡಿಯೋ ಕಳುಹಿಸಿದವರ ಗೌಪ್ಯತೆ ಕಾಪಾಡುವುದಾಗಿ ತಿಳಿಸಿದೆ.
