ಉದಯವಾಹಿನಿ , ಒಟ್ಟಾವ: ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಚೀನಾ ಜೊತೆಗೆ ಸಂಬಂಧ ಪುನಃಸ್ಥಾಪಿಸುವ ಮತ್ತು ಅಮೆರಿಕದ ಹೊರಗೆ ತಮ್ಮ ದೇಶಕ್ಕೆ ಹೊಸ ಆರ್ಥಿಕ ಅವಕಾಶ ಕಂಡುಕೊಳ್ಳುವ ಗುರಿ ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾರ್ಕ್ ಕಾರ್ನಿ ಅವರು ಚೀನಾಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ಚರ್ಚೆ ನಡೆಸಲು ಉದ್ದೇಶಿಸಿದ್ಧಾರೆ ಎಂದು ಹೇಳಲಾಗಿದೆ.
ಅಮೆರಿಕಾ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸಂಬಂಧಕ್ಕೆ ಹಾನಿಯಾಗದಂತೆ ಅಥವಾ ರಾಷ್ಟ್ರೀಯ ಭದ್ರತೆ ಮತ್ತು ಮಾನವ ಹಕ್ಕುಗಳ ಬದ್ಧತೆಗಳನ್ನು ರಾಜಿ ಮಾಡಿಕೊಳ್ಳದೆ ವ್ಯಾಪಾರವನ್ನು ವೈವಿಧ್ಯಗೊಳಿಸುವ ಗುರಿ ಸಮತೋಲನ ಸಾಧಿಸಲು ಕೆನಡಾ ಮುಂದಾಗಿ ಈ ಹಿನ್ನಲೆಯಲ್ಲಿ ಚೀನಾ ಅಧ್ಯಕ್ಷ್ಷ ಭೇಟಿ ಮಹತ್ವ ಪಡೆದುಕೊಂಡಿದೆ
ಕೆನಡಾ ತನ್ನ ಅತಿದೊಡ್ಡ ಗ್ರಾಹಕ ರಾಷ್ಟ್ರವಾದ ಅಮೆರಿಕ ಜೊತೆಗಿನ ವ್ಯಾಪಾರ ಭವಿಷ್ಯದ ಬಗ್ಗೆ ನಡೆಯುತ್ತಿರುವ ಅನಿಶ್ಚಿತತೆಯೊಂದಿಗೆ, ದೇಶವು ಈಗ ತನ್ನ ಆರ್ಥಿಕತೆ ರಕ್ಷಿಸಲು ಹದಗೆಟ್ಟ ಸಂಬಂಧಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ
2017ರ ನಂತರ ಕೆನಡಾದ ಪ್ರಧಾನ ಮಂತ್ರಿಯೊಬ್ಬರು ಚೀನಾಕ್ಕೆ ಮಾಡಿದ ಮೊದಲ ಪ್ರವಾಸ ಇದಾಗಿದ್ದು, ಈ ಪ್ರವಾಸ “ಪರಿಣಾಮಕಾರಿ ಮತ್ತು ಐತಿಹಾಸಿಕ ಎಂದು ಹೇಳಲಾಗಿದೆ. ಮುಂಬರುವ ದಶಕದಲ್ಲಿ ” ಕೆನಡಾದ ಅಮೆರಿಕಾದ ಅಲ್ಲದ ರಫ್ತುಗಳನ್ನು ದ್ವಿಗುಣಗೊಳಿಸುವ “ದೈರ್ಯಶಾಲಿ” ಯೋಜನೆಯ ಭಾಗವಾಗಿದೆ ಎಂದು ಕೆನಡಾದ ಹಿರಿಯ ಅಧಿಕಾರಿಗಳು ಬಣ್ಣಿಸಿದ್ದಾರೆ.
ಪ್ರಧಾನಿ ಮಾರ್ಕ್ ಕಾರ್ನಿ ಅವರ ಕಚೇರಿ ಪ್ರಕಾರ, ಚೀನಾದೊಂದಿಗೆ ಈಗಾಗಲೇ ವಿದೇಶಾಂಗ ಸಚಿವಾಲಯ ಎರಡೂ ದೇಶಗಳು “ಹಂಚಿಕೆಯ ಹಿತಾಸಕ್ತಿಗಳನ್ನು” ಹೊಂದಿವೆ ಮತ್ತು “ಜನರಿಂದ ಜನರಿಗೆ ಸಂಬಂಧಗಳು ಮತ್ತು ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸಲು” ಕೆಲಸ ಮಾಡಲು ಮುಂದಾಗಿದೆ ಎಂದಿದ್ಧಾರೆ

Leave a Reply

Your email address will not be published. Required fields are marked *

error: Content is protected !!