ಉದಯವಾಹಿನಿ , ಲಂಡನ್ : ಇಂಗ್ಲೆಂಡ್‌ನ ಪಶ್ಚಿಮ ಲಂಡನ್‌ನಲ್ಲಿ ಪಾಕಿಸ್ತಾನಿ ಗ್ರೂಮಿಂಗ್ ಗ್ಯಾಂಗ್ ಅಪಹರಿಸಿದೆ ಎನ್ನಲಾದ 16 ವರ್ಷದ ಬಾಲಕಿಯನ್ನು ರಕ್ಷಿಸಲು ಸಿಖ್ ಸಮುದಾಯದ 200ಕ್ಕೂ ಹೆಚ್ಚು ಸದಸ್ಯರು ಒಟ್ಟುಗೂಡಿದರು. ಗಂಟೆಗಳ ಕಾಲ ನಡೆದ ಪ್ರತಿಭಟನೆಯ ನಂತರ, ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಖ್ ಪ್ರೆಸ್ ಅಸೋಸಿಯೇಷನ್‌ನ ವರದಿಯ ಪ್ರಕಾರ, ಆರೋಪಿಯು 30ರ ಹರೆಯದವನೆಂದು ನಂಬಲಾಗಿದ್ದು, ಪಶ್ಚಿಮ ಲಂಡನ್‌ನ ಹೌನ್ಸ್ಲೋ ಪ್ರದೇಶದಲ್ಲಿ 16 ವರ್ಷದೊಳಗಿನ ಮಕ್ಕಳೊಂದಿಗೆ ಅನುಮಾನಾಸ್ಪದವಾಗಿ ಸ್ನೇಹ ಬೆಳೆಸುತ್ತಿದ್ದ ಎನ್ನಲಾಗಿದೆ. ಸಿಖ್ ಹುಡುಗಿ ಸುಮಾರು 13 ವರ್ಷದವಳಿದ್ದಾಗ ಅವಳೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಾರಂಭಿಸಿದನು.
ಬಾಲಕಿಯ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಬಳಿಕ ಹೌನ್ಸ್ಲೋದಲ್ಲಿ ನಡೆದ ಘಟನೆ ವೈರಲ್ ಆಗಿದೆ. ಹಲವಾರು ಗಂಟೆಗಳ ಪ್ರತಿಭಟನೆಯ ನಂತರ ಆರೋಪಿಯನ್ನು ಪೊಲೀಸ್ ವ್ಯಾನ್‌ಗೆ ಕರೆದೊಯ್ಯುತ್ತಿರುವ ದೃಶ್ಯಗಳು ಇದರಲ್ಲಿವೆ. ಪ್ರತಿಭಟನೆಯಲ್ಲಿ ಬಾಲಕಿಯ ಪೋಷಕರು ಸಹ ಭಾಗವಹಿಸಿದ್ದರು. 2025ರ ಡಿಸೆಂಬರ್ 30ರಂದು ಸಿಖ್ ಸಮುದಾಯದ ಗುಂಪಾದ ಎಕೆ ಮೀಡಿಯಾ 47 ತನ್ನ ನಾಯಕ ಜಸ್ಸಾ ಸಿಂಗ್ ಗ್ರೂಮರ್ ಗ್ಯಾಂಗನ್ನು ಎದುರಿಸುವ ದೃಶ್ಯವಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆರೋಪಿಯು ಅಫ್ಘಾನ್ ಮುಸ್ಲಿಂ ಹಿನ್ನೆಲೆಯವನಾಗಿದ್ದಾನೆ ಎನ್ನಲಾಗಿದೆ.
