ಉದಯವಾಹಿನಿ, ಫ್ರಾನ್ಸ್: ವರ್ಷದ ಹಿಂದೆ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಕ್ಷಣ ವಿದೇಶಿ ನೆರವನ್ನು ಕಡಿತ ಮಾಡಿರುವುದರ ಪರಿಣಾಮ ಈಗಾಗಲೇ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. 2025ರ ಜನವರಿ 20ರಂದು ಉದ್ಯಮಿ ಎಲಾನ್ ಮಸ್ಕ್ ಅವರ ಸಲಹೆಯ ಮೇರೆಗೆ ಟ್ರಂಪ್ ಅವರು ಲಕ್ಷಾಂತರ ಮಂದಿಗೆ ನೆರವು ನೀಡುತ್ತಿದ್ದ ಯುಎಸ್ ವಿದೇಶಿ ನೆರವನ್ನು ರದ್ದು ಪಡಿಸಿದ್ದರು. ಇದು ವಿಶ್ವದ ಹಲವು ಬಡ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ.ಯುಎಸ್ ವಿದೇಶಿ ನೆರವು ಬಡ ರಾಷ್ಟ್ರಗಳಿಗೆ ಹೆಚ್ಐವಿ, ಮಲೇರಿಯಾ ಮತ್ತು ಕ್ಷಯ ರೋಗದಂತಹ ರೋಗಗಳ ವಿರುದ್ಧ ಹೋರಾಡಲು ಮಾನವೀಯ ನರವಾಗಿತ್ತು. ಆದರೆ ಯುಎಸ್ ಇದನ್ನು ಸ್ಥಗಿತಗೊಳಿಸಿರುವುದರಿಂದ ಬಡ ರಾಷ್ಟ್ರಗಳ ಕಾರ್ಯಯೋಜನೆಯ ಮೇಲೆ ಪರಿಣಾಮ ಬೀರಿದೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ವೆಚ್ಚ ಕಡಿತಕ್ಕೆ ಸಲಹೆ ನೀಡಿದ ಬಳಿಕ ಟ್ರಂಪ್ ಅವರು ಮೊದಲ ಹಂತದಲ್ಲಿ ಯುಎಸ್ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಯ ಶೇ. 83ರಷ್ಟು ಕಾರ್ಯಕ್ರಮಗಳನ್ನು ತೆಗೆದುಹಾಕಿದರು. ಬಳಿಕ ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.ಇದರ ಪರಿಣಾಮವಾಗಿ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ಪ್ರಮುಖ ಪಾಶ್ಚಿಮಾತ್ಯ ದಾನಿ ರಾಷ್ಟ್ರಗಳು ತಮ್ಮದೇ ಆದ ನೆರವು ಬಜೆಟ್‌ಗಳಲ್ಲಿ ಭಾರಿ ಕಡಿತಗಳನ್ನು ಘೋಷಿಸಿದವು. ಇದರಿಂದ ಈಗಾಗಲೇ ಕಡಿಮೆಯಾಗಿರುವ ಮಾನವೀಯ ಕಾರ್ಯಗಳಿಗೆ ಹಣಕಾಸಿನ ಕೊರತೆ ಮತ್ತಷ್ಟು ಹೆಚ್ಚಾಯಿತು.

Leave a Reply

Your email address will not be published. Required fields are marked *

error: Content is protected !!