ಉದಯವಾಹಿನಿ, ಬಲ್ಲಿಯಾ (ಉತ್ತರ ಪ್ರದೇಶ): ಹಜ್​ಯಾತ್ರೆ ನಡೆಸುವವರಿಗೆ ಈ ಬಾರಿ ಡಿಜಿಟಲ್​ ನಾವೀನ್ಯತೆಯ ಬೆಂಬಲ ನೀಡುವ ಮೂಲಕ ಅವರ ಸುರಕ್ಷತೆ ಖಾತ್ರಿ ಪಡಿಸಲು ಭಾರತೀಯ ಹಜ್​ ಸಮಿತಿ ನಿರ್ಧರಿಸಿದೆ. ಇದಕ್ಕಾಗಿ 2026ರಲ್ಲಿ ಹಜ್​ ಯಾತ್ರೆ ನಡೆಸುವ 1.25 ಲಕ್ಷ ಯಾತ್ರಿಕರಿಗೆ ಸ್ಮಾರ್ಟ್​ವಾಚ್​ ಪರಿಚಯಿಸಿದೆ.

ಭಾರತೀಯ ಹಜ್​ ಸಮಿತಿ 1,22,518 ಯೂನಿಟ್ ಸ್ಮಾರ್ಟ್‌ವಾಚ್‌ಗಳಿಗೆ ಟೆಂಡರ್‌ಗಳನ್ನು ಡಿಸೆಂಬರ್ 2025ರಲ್ಲಿ ಆಹ್ವಾನಿಸಿತ್ತು. ಈ ಬಾರಿ ಪವಿತ್ರ ಮುಸ್ಲಿಂ ಯಾತ್ರೆ ನಡೆಸುವವರಿಗೆ ಇದನ್ನು ಸರಬರಾಜು ಮಾಡಲಾಗಿದೆ. ಮುಸ್ಲಿಂ ಪವಿತ್ರ ಸ್ಥಳವಾಗಿರುವ ಮೆಕ್ಕಾ ಮತ್ತು ಮದೀನಾಗೆ ತೀರ್ಥಯಾತ್ರೆ ಮಾಡುವುದು ಪ್ರತಿಯೊಬ್ಬ ಮುಸ್ಲಿಮರಿಗೆ ಇಸ್ಲಾಂನ ಐದನೇ ಮತ್ತು ಕೊನೆಯ ಸ್ತಂಭವಾಗಿದೆ.
ಹಜ್​ ಯಾತ್ರಿಕರಿಗೆ ಸ್ಮಾರ್ಟ್​ ವಾಚ್​: ಭಾರತೀಯ ಹಜ್​ ಸಮಿತಿ ವೆಬ್​ಸೈಟ್​ ಪ್ರಕಾರ, ಈ ಸ್ಮಾರ್ಟ್​ ವಾಚ್​ಗಳಲ್ಲಿ 1 ಜಿಬಿ ಡೇಟಾ ಹೊಂದಿರುವ ಇ ಸಿಮ್​ ಅಳವಡಿಕೆ ಮಾಡಲಾಗುವುದು. ಈ ಡೇಟಾ ಅವಧಿ 60 ದಿನವಾಗಿದ್ದು, ಸೌದಿ ಅರೇಬಿಯಾದಲ್ಲೂ ಕಾರ್ಯ ನಿರ್ವಹಿಸಲಿದೆ.

ಹೃದಯ ಬಡಿತ, ಆಮ್ಲಜನಕದ ಏರಿಳಿತ, ನಡಿಗೆಯ ಲೆಕ್ಕ, ನಿದ್ರೆಯ ಟ್ರ್ಯಾಕಿಂಗ್​ ಹೊಂದಿದ್ದು, ಆರೋಗ್ಯ ಕುರಿತು ಮತ್ತು ಸೂಕ್ಷ್ಮ ಆರೈಕೆ ಕುರಿತು ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ. ಧಾರ್ಮಿಕ ಸೌಲಭ್ಯದ ವೈಶಿಷ್ಟ್ಯವನ್ನು ಈ ವಾಚ್​ ಹೊಂದಿದ್ದು, ಅಲ್ಲಿನ ಭೌಗೋಳಿಕ ಕಾಲಮಾನಕ್ಕೆ ಸರಿಯಾಗಿ ನಮಾಜ್​ ಮಾಡುವ ಸಮಯದಲ್ಲಿ ಎಚ್ಚರಿಸುವ, ಕ್ವಿಬ್ಲಾ ದಿಕ್ಕುಸೂಚನೆ ಹಾಗೂ ಇಸ್ಲಾಮಿಕ್​ ಸೂಚನೆಗಳನ್ನು ನೀಡಲಿದೆ.

Leave a Reply

Your email address will not be published. Required fields are marked *

error: Content is protected !!