ಉದಯವಾಹಿನಿ, : ಒಂದು ವಾರಕ್ಕೂ ಹೆಚ್ಚು ಕಾಲ ಅಮೆರಿಕಾದ ನೈಋತ್ಯ ಭಾಗದಲ್ಲಿ ಏರಿದ್ದ ತಾಪಮಾನದ ಅಲೆ ಇದೀಗ ಮಧ್ಯ ಮತ್ತು ಪೂರ್ವ ಪ್ರದೇಶಗಳಿಗೆ ವಿಸ್ತರಿಸಲು ಸಿದ್ಧವಾಗಿದ್ದು, ಜನತೆಗೆ ಮತ್ತಷ್ಟು ಸಂಕಷ್ಟ ತಂದಿದೆ. ಈಗಾಗಲೇ ದೇಶದಲ್ಲಿ ತಾಪಮಾನದಿಂದ ೨೦ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದ್ದು, ೫೦ಕ್ಕೂ ಹೆಚ್ಚಿನ ಸಾವಿನ ಕಾರಣಗಳ ಬಗ್ಗೆ ತನಿಖೆ ಮುಂದುವರೆದಿದೆ. ಕಳೆದೊಂದು ವಾರದಲ್ಲಿ ಅಮೆರಿಕಾದ ಪ್ರಮುಖ ನಗರಗಳಲ್ಲಿ ದಾಖಲೆಯ ಮಟ್ಟದ ತಾಪಮಾನದಿಂದ ಸುಮಾರು ೫.೯೦ ಕೋಟಿ ಜನರು ತೀವ್ರ ಸಮಸ್ಯೆ ಎದುರಿಸಿದ್ದರು. ಇದೀಗ ಮಧ್ಯಪಶ್ಚಿಮದಿಂದ ಆರಂಭಗೊಂಡ ವಿಪರೀತ ತಾಪಮಾನದ ಬಿಸಿ ವಾತಾವರಣವು ಬುಧವಾರದ ವೇಳೆಗೆ ಫ್ಲೋರಿಡಾದ ದಕ್ಷಿಣ ತುದಿಯವರೆಗೆ ಪೂರ್ವಕ್ಕೆ ವಿಸ್ತರಿಸಲಿದೆ ಎಂದು ಹವಾಮಾನಶಾಸ್ತ್ರಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಜಗತ್ತು ಕಂಡು ಕೇಳರಿಯದ ರೀತಿಯಲ್ಲಿ ಉಷ್ಣ ವಾತಾವರಣ ನಿರ್ಮಾಣವಾಗುವುದು ಖಚಿತ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!