
ಉದಯವಾಹಿನಿ ಸವದತ್ತಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ 31-07-2023 ರಂದು ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಿತು, ಅಧ್ಯಕ್ಷರಾಗಿ ಶ್ರೀ ನಾಗರಾಜ.ಚದ್ರಪ್ಪ ದಳವಾಯಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶಾರದಾ ಬಾಳಪ್ಪ ಸೊಗಲದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ,ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ ಹರ್ಲಾಪೂರ. ಶಿವಾನಂದ ಸಂಗೊಳ್ಳಿ. ಪಾಂಡುರಂಗ ತಳವಾರ. ನಾಗಪ್ಪ ತಳವಾರ. ರತ್ನವ್ವ ಮಾದರ. ಶಾಂತವ್ವ ಪಟಾಣಿ. ಉಮೇಶ್ ಕುರಿ. ಶೋಭಾ ತಳವಾರ. ರುದ್ರವ್ವ ಪೆಂಟೇದ. ಪ್ರೇಮಾ ಗದ್ಗಿಮಠ. ಮಲ್ಲವ್ವಾ ಸಣ್ಣಾರ. ಹಾಗೂ ಚುನಾವಣಾಧಿಕಾರಿಗಳಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯ ಸಂಗಪ್ಪಗೋಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹಾದೇವ ಗಡೇಕಾರ. ಗ್ರಾಮ ಪಂಚಾಯಿತಿ ದ್ವಿ ಸದಸ್ಯ ಸಹಾಯಕಯರಾದ ವಿಶಾಲಾಕ್ಷಿ ಕುರಹಟ್ಟಿ ಗ್ರಾಮ ಪಂಚಾಯಿತಿ ಸುತಗಟ್ಟಿ ಸರ್ವ ಸಿಬ್ಬಂದಿ ವರ್ಗ.ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸುತಗಟ್ಟಿ, ಹಿಟ್ಟಣಗಿ, ಏಣಗಿ, ಗ್ರಾಮಗಳ ಸಮಸ್ತ ನಾಗರಿಕರು ಹಾಜರಿದ್ದರು.
