ಉದಯವಾಹಿನಿ ಸವದತ್ತಿ :ತಾಲೂಕಿನ ಮನಿಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರ 2 ರಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಯಿತು
ಸಮುದಾಯ ಆರೋಗ್ಯ ಅಧಿಕಾರಿಗಳಾದ ಶಿವಶಂಕರ ಭೂಷನ್ನವರ್ ಅವರು ಎಲ್ಲ ಗರ್ಭಿಣಿ ಹಾಗೂ ತಾಯಂದಿರನ್ನು ಕುರಿತು ಮಾತನಾಡಿ ತಾಯಿಯ ಎದೆ ಹಾಲು ಅತೀ ಶ್ರೇಷ್ಟ ಇದಕ್ಕಿಂತ ಮಿಗಿಲಾದ ಲಸಿಕೆ ಮತ್ತೊಂದಿಲ್ಲ ಇದನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ ಮಗು ಜನಿಸಿದ 1 ಗಂಟೆ ಒಳಗಾಗಿ ಸ್ತನ ಪಾನ ಪ್ರಾರಂಭಿಸಿದರೆ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮಗು ಸದೃಢ, ಬಲಿಷ್ಟ ಹಾಗೂ ಚುರುಕಾಗಿ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಮಗು ತಾಯಿಯ ನಡುವೆ ಪ್ರೀತಿ ಬಾಂಧವ್ಯ ಬೆಳೆಯುತ್ತದೆ ತಾಯಿಯ ಹಾಲು ಅಮೃತಕ್ಕೆ ಸಮಾನ ಆದ್ದರಿಂದ ಪ್ರತಿ ಮಗುವಿಗೆ ಎದೆ ಹಾಲು ಉಣಿಸುವದು ತಾಯಂದಿರ ಜವಾಬ್ದಾರಿ ಎಂದು ತಿಳಿಸಿದರು, ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಣಾಅಧಿಕಾರಿ ಆರ್ ಆರ್ ಈಟಿ ಅವರು ಮಾತನಾಡಿ ತಾಯಿಯ ಎದೆ ಹಾಲು ಅತೀ ಸ್ವಚ್ಚ ಮತ್ತು ಸುರಕ್ಷಿತ ವಾಗಿರುತ್ತದೆ ಇದರಂತ ಪೋಷಕಾಂಶ ಆಹಾರ ಭೂಮಿಯ ಮೇಲೆ ಮತ್ತೊಂದಿಲ್ಲ ಕೆಲವು ಮಹಿಳೆಯರು ಸಮಾಜಕ್ಕೆ ನಾಚಿಕೊಂಡು ಮಗುವಿಗೆ ತಾಯಿಯ ಹಾಲಿನಿಂದ ವಂಚನೆ ಮಾಡುತ್ತಾರೆ ಹೀಗಾಗಿ ಮಗು ಆರೋಗ್ಯದಿoದ ಬೆಳೆಯಲು ತೊಂದರೆ ಆಗಿ ಪದೇ ಪದೇ ಸಣ್ಣ ಪುಟ್ಟ ಕಾಯಿಲೆಗಳಿಂದ ಬಳಲುತ್ತವೆ ಎದೆ ಹಾಲು ಉಣಿಸಿ ಶಿಶು ಮರಣ ತಪ್ಪಿಸಿ ಎಂದು ತಿಳಿಸಿದರು.
ಈ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯಾರಾದ ಲಕ್ಷ್ಮೀ ಮುರನಾಳ ಪೂಜಾ ಅಂಗನವಾಡಿ ಸಹಾಯಕಿಯರು ಆಶಾ ಕಾರ್ಯಕರ್ತೆಯರು ನಾಗಮ್ಮ ಕುರಿ ಲಕ್ಷ್ಮವ್ವ ಕುರುಬಗಟ್ಟಿ ಗ್ರಾಮಸ್ಥರು, ಗರ್ಭಿಣಿ ಸ್ತ್ರೀಯರು ಮತ್ತು ತಾಯಂದಿರು ಉಪಸ್ಥಿತರಿದ್ದರು.
