ಉದಯವಾಹಿನಿ,ನ್ಯೂಯಾರ್ಕ್ : ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಂದು ಪಿತೂರಿ ನಡೆಸಲಾಗಿರುವ ಶಂಕೆ ಇದೀಗ ವ್ಯಕ್ತವಾಗಿದೆ. ೨೦೨೦ ರ ಚುನಾವಣಾ ಸೋಲನ್ನು ರದ್ದುಗೊಳಿಸಲು ಸಂಚು ಹೂಡಿದ್ದಾರೆ ಎಂಬ ಪ್ರಕರಣವನ್ನು ಟ್ರಂಪ್ ವಿರುದ್ಧ ಹೊರಿಸಲಾಗಿದೆ. ಸದ್ಯ ಪ್ರಕರಣದ ವಿರುದ್ಧ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಹಾಸ್ಯದಾಯಕವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾವನ್ನು ವಂಚಿಸಿದ, ಸಾಕ್ಷಿಯನ್ನು ಹಾಳುಮಾಡುವುದು ಮತ್ತು ನಾಗರಿಕರ ಹಕ್ಕುಗಳ ವಿರುದ್ಧ ಪಿತೂರಿ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಟ್ರಂಪ್ ವಿರುದ್ಧ ಆರೋಪ ಹೊರಿಸಲಾಗಿದೆ. ಈಗಾಗಲೇ ವರ್ಗೀಕೃತ ಫೈಲ್‌ಗಳನ್ನು ತಪ್ಪಾಗಿ ನಿರ್ವಹಿಸಿರುವ ಬಗ್ಗೆ ಮತ್ತು ಪೋರ್ನ್ ಸ್ಟಾರ್‌ಗೆ ಹಣದ ಪಾವತಿಯನ್ನು ಮುಚ್ಚಿಡಲು ವ್ಯಾಪಾರ ದಾಖಲೆಗಳನ್ನು ಸುಳ್ಳು ಮಾಡಿದ ಮುಂತಾದ ಪ್ರಕರಣಗಳನ್ನು ಟ್ರಂಪ್ ವಿರುದ್ಧ ದಾಖಲಿಸಲಾಗಿದೆ.

