ಉದಯವಾಹಿನಿ, ವಾರಾಣಸಿ: ಉತ್ತರಪ್ರದೇಶದ ಜ್ಞಾನವ್ಯಾಪಿ ಮಸೀದಿಯಲ್ಲಿ ಕಂಡು ಬಂದ ಶಿವಲಿಂಗ ಆಕೃತಿ ಹಿನ್ನೆಲೆಯಲ್ಲಿ ಹಿಂದು ದೇವಾಲಯವೋ ಅಥವಾ ಮಸೀದಿಯೋ ಎನ್ನುವ ಜಿಜ್ಞಾಸೆಯ ಹಿನ್ನೆಲೆಯಲ್ಲಿ ನಾಳೆ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಕಟಿಸಿಲಿದೆ.
ಇದಕ್ಕೂ ಮೊದಲು ಜ್ಞಾನವ್ಯಾಪಿ ಮಸೀದಿಯಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಆಗಸ್ಟ್ ೧ರಿಂದ ಆಗಸ್ಟ್ ೫ರವರೆಗೆ ನಡೆಯುವ ವಸ್ತು ಪ್ರದರ್ಶನದಲ್ಲಿ ಜ್ಞಾನವಾಪಿ ಮಸೀದಿಯ ಒಳ ಮತ್ತು ಹೊರಗಿನ ಪ್ರದೇಶದಲ್ಲಿ ಸಿಕ್ಕ ಕುರುಹುಗಳು ಮತ್ತು ಚಿತ್ರಗಳನ್ನು ೬೫ ದೊಡ್ಡ ಫಲಕಗಳಲ್ಲಿ ಅಳವಡಿಸಿ ಜನರಲ್ಲಿ ಜ್ಞಾನವಾಪಿ ಬಗೆಗಿನ ವಾಸ್ತವವನ್ನು ಹೇಳುವ ಕೆಲಸ ಮಾಡಲಾಗುತ್ತಿದೆ. ಈ ನಡುವೆ ನಾಳೆ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಲಿದೆ. ನ್ಯಾಯಾಲಯ ರಚಿಸಿದ ಸಮಿತಿ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಸಾಕ್ಷ್ಯ, ಫೋಟೋಗಳು ಇವಾಗಿವೆ.
ಜ್ಞಾನವಾಪಿ ಮಸೀದಿಯ ತಮಗೆ ಸೇರಿದ್ದು ಎಂದು ಒತ್ತಾಯಿಸಿ ಮುಸ್ಲಿಂ ಪರ ಫಿರ್ಯಾದಿದಾರರು, ಹಿಂದೂ ಅರ್ಜಿದಾರರು ತಮ್ಮ ತಮ್ಮ ಸಾಕ್ಷಿ ತೋರಿಸಲು ತಯಾರಿ ಆರಂಭಿಸಿದ್ದಾರೆ.
ನಾಳೆ ಬರುವ ಅಂತಿಮ ತೀರ್ಪಿನ ಬಳಿಕ ಯಾವುದೇ ಸಮುದಾಯ ಸಂಘರ್ಷಕ್ಕೆ ಇಳಿಯಬಾರದು ಎಂಬ ಕಾರಣಕ್ಕಾಗಿ ಈ ಪ್ರದರ್ಶನ ನಡೆಸಲಾಗುತ್ತಿದೆ. 
